ಜೀವನದಲ್ಲಿ ಇಷ್ಟು ಎಂದಿಗೂ ಮೋಸ ಹೋಗಿಲ್ಲ, ಪಕ್ಷ ಮತ್ತು ಕುಟುಂಬ ಹೋಳಾಗಿದೆ: ಸುಪ್ರಿಯಾ ಸುಳೆ ವಾಟ್ಸಾಪ್ ಸ್ಟೇಟಸ್
ವಾಟ್ಸಾಪ್ ಸ್ಟೇಟಸ್ ನ್ನು ನಂಬುವುದಾದರೆ ಎನ್ ಸಿಪಿ ನಾಯಕ ಶರದ್ ಪವಾರ್ ಅವರ ಪುತ್ರಿ ಸಂಸದೆ ಸುಪ್ರಿಯಾ ಸುಳೆ ವಾಟ್ಸಾಪ್ ಸ್ಟೇಟಸ್ ಪ್ರಕಾರ ಪವಾರ್ ಕುಟುಂಬದಲ್ಲಿ ಬಿರುಕು ಉಂಟಾಗಿದ್ದು ಅಜಿತ್ ಪವಾರ್ ನಿಂದಾಗಿ ಕುಟುಂಬ ದೂರವಾಗಿದೆ ಎಂದು ಹೇಳುತ್ತದೆ.

ಮುಂಬೈ: ವಾಟ್ಸಾಪ್ ಸ್ಟೇಟಸ್ ನ್ನು ನಂಬುವುದಾದರೆ ಎನ್ ಸಿಪಿ ನಾಯಕ ಶರದ್ ಪವಾರ್ ಅವರ ಪುತ್ರಿ ಸಂಸದೆ ಸುಪ್ರಿಯಾ ಸುಳೆ ವಾಟ್ಸಾಪ್ ಸ್ಟೇಟಸ್ ಪ್ರಕಾರ ಪವಾರ್ ಕುಟುಂಬದಲ್ಲಿ ಬಿರುಕು ಉಂಟಾಗಿದ್ದು ಅಜಿತ್ ಪವಾರ್ ನಿಂದಾಗಿ ಕುಟುಂಬ ದೂರವಾಗಿದೆ ಎಂದು ಹೇಳುತ್ತದೆ.
ಸುಪ್ರಿಯಾ ಸುಳೆಯವರ ಕಚೇರಿ ಎಎನ್ಐ ಸುದ್ದಿಸಂಸ್ಥೆಗೆ ಇದನ್ನು ಖಚಿತಪಡಿಸಿದೆ. ಆದರೆ ಸುದ್ದಿಸಂಸ್ಥೆ ಸಂಪರ್ಕಿಸಿದಾಗ ಸುಪ್ರಿಯಾ ಸುಳೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಮೂರೂ ಪಕ್ಷಗಳ ಸುದ್ದಿಗೋಷ್ಠಿ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ಸುಳೆಯವರ ಮತ್ತೊಂದು ವಾಟ್ಸಾಪ್ ಸ್ಟೇಟಸ್ ನಲ್ಲಿ, ಜೀವನದಲ್ಲಿ ಯಾರನ್ನು ನೀವು ನಂಬುತ್ತೀರಿ?, ಇಷ್ಟು ಮೋಸ ಇದುವರೆಗೆ ಆಗಿಲ್ಲ, ಅವರನ್ನು ಬೆಂಬಲಿಸಿದೆವು, ಪ್ರೀತಿಸಿದೆವು, ಅದಕ್ಕೆ ಹಿಂತಿರುಗಿ ಏನು ಸಿಕ್ಕಿದೆ ನೋಡಿ ಎಂದು ಬರೆದುಕೊಂಡಿದ್ದಾರೆ.
ಶರದ್ ಪವಾರ್ ಅವರು ಇಂದು ಸಂಜೆ 4.30ಕ್ಕೆ ಎನ್ ಸಿಪಿ ಶಾಸಕರ ಸಭೆ ಕರೆದಿದ್ದಾರೆ. ಇದರ ಬಳಿಕ ಎನ್ ಸಿಪಿಯ ಮುಂದಿನ ರಾಜಕೀಯ ನಿರ್ಧಾರ ಸ್ಪಷ್ಟವಾಗಲಿದೆ.
ಎನ್ ಸಿಪಿ ನಾಯಕ ನವಾಬ್ ಮಲಿಕ್, ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸಂದರ್ಭದಲ್ಲಿ ರಾಜ್ಯಪಾಲ ಕೊಶ್ಯಾರಿಗೆ ಬೆಂಬಲ ಸೂಚಿಸಿದ ಶಾಸಕರ ಹೆಸರುಗಳನ್ನು ಹಾಜರಾತಿ ಪಟ್ಟಿಯಿಂದ ತೆಗೆದುಕೊಳ್ಳಲಾಗಿದೆ. ಪ್ರಮಾಣವಚನಕ್ಕೆ ಅದನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಬಿಜೆಪಿ-ಅಜಿತ್ ಪವಾರ್ ಸರ್ಕಾರಕ್ಕೆ 22 ಎನ್ ಸಿಪಿ ಶಾಸಕರ ಬೆಂಬಲವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


