ನಾನು ತಿಳಿದ ಧೈರ್ಯಶಾಲಿ ಮಹಿಳೆಗಾಗಿ-ಅಜ್ಜಿ ಇಂದಿರಾ ಜನ್ಮದಿನಕ್ಕೆ ಕವಿತೆ ಅರ್ಪಣೆ ಮಾಡಿದ ಪ್ರಿಯಾಂಕಾ
ಕಾಂಗ್ರೆಸ್ ನಾಯಕಿ, ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 102ನೇ ಜನ್ಮದಿನದಂದು ಅವರಿಗೊಂದು ವಿಶೇಷ ಕವಿತೆಯನ್ನು ಸಮರ್ಪಿಸಿದ್ದಾರೆ.

ನವದೆಹಲಿ: ಕಾಂಗ್ರೆಸ್ ನಾಯಕಿ, ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 102ನೇ ಜನ್ಮದಿನದಂದು ಅವರಿಗೊಂದು ವಿಶೇಷ ಕವಿತೆಯನ್ನು ಸಮರ್ಪಿಸಿದ್ದಾರೆ.
ನಾನು ತಿಳಿದಿರುವ ಧೈರ್ಯಶಾಲಿ ಮಹಿಳೆಯ ನೆನಪಿಗಾಗಿ ಎಂದು ಟಿಪ್ಪಣಿ ನೀಡಿರುವ ಪ್ರ್ಯಾಂಕಾ ವಿಲಿಯಂ ಅರ್ನೆಸ್ಟ್ ಹೆನ್ಲಿಯವರ ಇನ್ವಿಕ್ಟಸ್ ಎಂಬ ಕವನವನ್ನು ಉಲ್ಲೇಖಿಸಿದ್ದಾರೆ.
ಕವಿತೆಯ ಜೊತೆಗೆ, ಪ್ರಿಯಾಂಕಾ ಇಂದಿರಾಗಾಂಧಿ ಅವರೊಂದಿಗೆ ಆಡುವ ತನ್ನ ಬಾಲ್ಯದ ಕಪ್ಪು ಬಿಳುಪು ಭಾವಚಿತ್ರವನ್ನೂ ಸಹ ಪೋಸ್ಟ್ ಮಾಡಿದ್ದಾರೆ.
ಇನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ತಮ್ಮ ಅಜ್ಜಿಯ ಹುಟ್ಟುಹಬ್ಬದಂದು ಅವರಿಗೆ ಗೌರವ ಸೂಚಿಸಿದ್ದು "ಬಲವಾದ, ಸಮರ್ಥ ನಾಯಕತ್ವ ಮತ್ತು ಅದ್ಭುತ ನಿರ್ವಹಣಾ ಕೌಶಲ್ಯದಿಂದ ಕೂಡಿದ್ದ ಉಕ್ಕಿನ ಮಹಿಳೆ, ನನ್ನ ಪ್ರೀತಿಯ ಅಜ್ಜಿ ಇಂದಿರಾ ಗಾಂಧಿ ಭಾರತವನ್ನು ಪ್ರಬಲ ದೇಶವಾಗಿ ಮಾಡುವಲ್ಲಿ ಮುಖ ಪಾತ್ರ ವಹಿಸಿದ್ದಾರೆ. ಅವರ ಜನ್ಮದಿನಾಚರಣೆಯಂದು ನಾನು ಗೌರವ ಸಲ್ಲಿಸುತ್ತೇನೆ" ಎಂದು ಟ್ವಿಟ್ತರ್ ನಲ್ಲಿ ಸ್ಮರಿಸಿದ್ದಾರೆ.
ಇಂದು ಮುಂಜಾನೆಯೇ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಮತ್ತಿತರರೌ ದಿವಂಗತ ನಾಯಕಿಗೆ ಗೌರವ ನಮನ ಸಲ್ಲಿಸಿದ್ದರು.
ಸಂಸತ್ತಿನಲ್ಲಿ ಮಾಜಿ ಪ್ರಧಾನ ಮಂತ್ರಿಯ ಭಾವಚಿತ್ರಕ್ಕೆ ಹೂಮಾಲೆ ಹಾಕಿದ್ದರೆ ಕಾಂಗ್ರೆಸ್ ನಾಯಕರು ಅವರಿಗೆ ಪುಷ್ಪನಮನ ಸಲ್ಲಿಸಿದ್ದರು.
ನವೆಂಬರ್ 19, 1917 ರಂದು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಮತ್ತು ಕಮಲಾ ನೆಹರೂ ದಂಪತಿಗೆ ಜನಿಸಿದ ಇಂದಿರಾ ಗಾಂಧಿ ದೇಶದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನ ಮಂತ್ರಿಯಾಗಿ ಜನವರಿ 1966 ರಿಂದ ಮಾರ್ಚ್ 1977 ರವರೆಗೆ ಮತ್ತು 1980 ರ ಜನವರಿಯಿಂದ 1984 ರ ಅಕ್ಟೋಬರ್ನಲ್ಲಿ ಅವರ ಹತ್ಯೆ ನಡೆಯುವವರೆಗೆ ದೇಶಸೇವೆ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


