ನರಿ ಬುದ್ಧಿ ಪ್ರದರ್ಶಿಸಿದ ಪಾಕ್: ಗುರುದ್ವಾರದಲ್ಲಿ ಬಾಂಬ್ ತುಣುಕು ಪ್ರದರ್ಶಿಸಿ ಭಾರತದ ವಿರುದ್ಧವೇ ಸಿಕ್ಖರ ಎತ್ತಿಕಟ್ಟಲು ಕುತಂತ್ರ
ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಚಾಲನೆ ಸಿಕ್ಕಾಗಿನಿಂದಲೂ ಒಂದಲ್ಲಾ ಒಂದು ರೀತಿ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸುತ್ತಿರುವ ಪಾಕಿಸ್ತಾನ, ಭಾರತೀಯ ಸಿಖ್ಖರನ್ನು ಭಾರತದ ವಿರುದ್ಧವೇ ಎತ್ತಿಕಟ್ಟುವ ನಿಟ್ಟಿನಲ್ಲಿ ಸಂಚು ರೂಪಿಸಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ನವದೆಹಲಿ: ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಚಾಲನೆ ಸಿಕ್ಕಾಗಿನಿಂದಲೂ ಒಂದಲ್ಲಾ ಒಂದು ರೀತಿ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸುತ್ತಿರುವ ಪಾಕಿಸ್ತಾನ, ಭಾರತೀಯ ಸಿಖ್ಖರನ್ನು ಭಾರತದ ವಿರುದ್ಧವೇ ಎತ್ತಿಕಟ್ಟುವ ನಿಟ್ಟಿನಲ್ಲಿ ಸಂಚು ರೂಪಿಸಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಕರ್ತಾರ್ಪುರದ ಗುರುದ್ವಾರದ ಬಳಿ ಪಾಕಿಸ್ತಾನ ಸರ್ಕಾರವು ಪ್ರದರ್ಶನ ಸ್ಥಳವೊಂದನ್ನು ತೆರೆದಿದ್ದು, ಅಲ್ಲಿ ಬಾಂಬ್'ನ ತುಣುಕನ್ನು ಪ್ರದರ್ಶನಕ್ಕೆ ಇಟ್ಟಿದೆ.
1971ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದ ವನೇಳೆ ದರ್ಬಾರ್ ಸಾಹಿಬ್ ಪಕ್ಕದಲ್ಲಿಯೇ ಬಿದ್ದ, ಭಾರತದ ತುಣುಕನ್ನು ಅಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಜೊತೆಗೆ ಬಾಂಬ್'ನ ಕೆಳಗೆ ನೀಡಿರುವ ಮಾಹಿತಿಯಲ್ಲಿ ಯುದ್ಧದ ವೇಳೆ ಭಾರತೀಯ ಸೇನಾ ಪಡೆಗಳು ದರ್ಬಾರ್ ಸಾಹಿಬ್ ಗುರುದ್ವಾರವನ್ನು ಧ್ವಂಸ ಮಾಡಲು ಬಾಂಬ್ ದಾಳಿ ನಡೆಸಿತ್ತು. ಅದರ ಕುರುಹು ಈ ಬಾಂಬ್ ತುಣುಕು. ಆದರೆ, ದೇವರ ಆಶೀರ್ವಾದದಿಂದ ಈ ಅನಾಹುತ ತಪ್ಪಿದೆ ಎಂದು ಅಡಿಬರಹ ಬರೆದಿದೆ.
ಇದು ಸಿಖ್ಖರನ್ನು ಭಾರತದ ಸೈನಿಕರ ವಿರುದ್ಧ ಪ್ರಚೋದಿಸಲು ಪಾಕಿಸ್ತಾನ ಈ ರೀತಿಯ ಕುತಂತ್ರ ನೀತಿಯನ್ನು ಅನುಸರಿಸಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


