ದೇಶ

ಜೀವಕ್ಕೆ ಎರವಾದ ಮೊಟ್ಟೆ ಸೇವನೆ: 2 ಸಾವಿರ ರೂಪಾಯಿಗಾಗಿ ಪ್ರಾಣತೆತ್ತ ಯುವಕ

ಕೇವಲ ಎರಡು ಸಾವಿರಕ್ಕಾಗಿ 50 ಕೋಳಿ ಮೊಟ್ಟೆಗಳನ್ನು ತಿನ್ನುವುದಾಗಿ ಬೆಟ್ಟಿಂಗ್ ಕಟ್ಟಿ, ಕೊನೆಗೆ ಪ್ರಾಣವನ್ನೇ ಕಳೆದುಕೊಂಡ ವಿಲಕ್ಷಣ ಘಟನೆ ಉತ್ತರಪ್ರದೇಶದ ಜೌನ್​ಪುರ್ ಜಿಲ್ಲೆಯಲ್ಲಿ ನಡೆದಿದೆ.

ಜೀವಕ್ಕೆ ಎರವಾದ ಮೊಟ್ಟೆ ಸೇವನೆ: 2 ಸಾವಿರ ರೂಪಾಯಿಗಾಗಿ ಪ್ರಾಣತೆತ್ತ ಯುವಕ
ಸಾಂದರ್ಭಿಕ ಚಿತ್ರ
Published On :

ಲಕ್ನೋ: ಕೇವಲ ಎರಡು ಸಾವಿರಕ್ಕಾಗಿ 50 ಕೋಳಿ ಮೊಟ್ಟೆಗಳನ್ನು ತಿನ್ನುವುದಾಗಿ ಬೆಟ್ಟಿಂಗ್ ಕಟ್ಟಿ, ಕೊನೆಗೆ ಪ್ರಾಣವನ್ನೇ ಕಳೆದುಕೊಂಡ ವಿಲಕ್ಷಣ ಘಟನೆ  ಉತ್ತರಪ್ರದೇಶದ ಜೌನ್​ಪುರ್ ಜಿಲ್ಲೆಯಲ್ಲಿ ನಡೆದಿದೆ.

ಸುಭಾಷ್ ಯಾದವ್ (42) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಬಿಬಿಗಂಜ್ ಮಾರುಕಟ್ಟೆ ನಗರದಲ್ಲಿ ಯಾದವ್ ಅವರು ತಮ್ಮ ಸ್ನೇಹಿತನೊಂದಿಗೆ ಮೊಟ್ಟೆ ತಿನ್ನುವಾಗ ಇಬ್ಬರ ನಡುವೆ ಸವಾಲಿನ ಮಾತುಕತೆ ನಡೆದಿದೆ. ಅದು ಏನೆಂದರೆ 50 ಮೊಟ್ಟೆಗಳನ್ನು ತಿಂದರೆ 2 ಸಾವಿರ ಪಡೆದುಕೊಳ್ಳುವ ಚಾಲೆಂಜ್ ಅದಾಗಿತ್ತು. 

ಸವಾಲು ಸ್ವೀಕರಿಸಿದ ಯಾದವ್ ಮೊಟ್ಟೆಗಳನ್ನು ತಿನ್ನಲು ಆರಂಭಿಸಿದ್ದಾರೆ. 42 ಮೊಟ್ಟೆಗಳನ್ನು ತಿಂದಾಗ ಯಾದವ್ ಸ್ಥಳದಲ್ಲೇ ಕುಸಿದುಬಿದ್ದು, ಪ್ರಜ್ಞೆ ತಪ್ಪಿದ್ದಾರೆ. ತಕ್ಷಣದಲ್ಲಿ ಸ್ಥಳದಲ್ಲಿ ಇದ್ದವರು ಸುಭಾಷ್ ಯಾದವ್ ಅವರನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದಾದ ಕೆಲವು ಗಂಟೆಗಳ ಬಳಿಕ ಚಿಕಿತ್ಸೆ ಫಲಿಸದೆ ಸುಭಾಷ್ ಯಾದವ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರು ಮೊದಲು ಸುಭಾಷ್‌ನನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಆದರೆ ಅಲ್ಲಿನ ವೈದ್ಯರು ಆತನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದಾಗ ಆಸ್ಪತ್ರೆಗೆ ದಾಖಲಾದ ಒಂದು ಗಂಟೆಯಲ್ಲಿ ಸುಭಾಷ್ ಮೃತಪಟ್ಟಿದ್ದಾನೆ.ಸುಭಾಸ್ ಅತಿಯಾಗಿ ಮೊಟ್ಟೆ ಸೇವಿಸಿದ್ದಕ್ಕೆ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.