ಮೋದಿ ಸರ್ಕಾರ 2.0: ಸಂಪುಟದಿಂದ ಮಿಸ್ ಆದ ಪ್ರಭಾವಿ ಮಾಜಿ ಕೇಂದ್ರ ಸಚಿವರಿವರು!
ನರೇಂದ್ರ ಮೋದಿ ಅವರು 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಮೋದಿ ಕ್ಯಾಬಿನೆಟ್ ಗೆ ಒಟ್ಟು 57 ನಾಯಕರು ಸಚಿವರಾಗಿ ಸೇರ್ಪಡೆಯಾಗಿದ್ದಾರೆ.

Published On :
ನವದೆಹಲಿ: ನರೇಂದ್ರ ಮೋದಿ ಅವರು 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಮೋದಿ ಕ್ಯಾಬಿನೆಟ್ ಗೆ ಒಟ್ಟು 57 ನಾಯಕರು ಸಚಿವರಾಗಿ ಸೇರ್ಪಡೆಯಾಗಿದ್ದಾರೆ.
ಪ್ರಧಾನಿ ಮೋದಿ ಸೇರಿದಂತೆ ಒಟ್ಟು 57 ಸಚಿವರು ಕ್ಯಾಬಿನೆಟ್ ಗೆ ಸೇರ್ಪಡೆಯಾಗಿದ್ದು, ಈ ಪೈಕಿ 25 ಮಂದಿ ರಾಜ್ಯಖಾತೆ ಸಚಿವರಾಗಿದ್ದಾರೆ. ಅಂತೆಯೇ ಈ ಹಿಂದಿನ ಸರ್ಕಾರದಲ್ಲಿದ್ದ 33 ಮಂದಿ ಸಚಿವರು 2ನೇ ಅವಧಿಗೂ ಮುಂದುವರೆದಿದ್ದು, 25 ಮಂದಿ ಸಂಸದರು ಮೊದಲ ಬಾರಿಗೆ ಮೋದಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಸುಂಪುಟದಿಂದ ಪ್ರಭಾವಿಗಳಿಗೆ ಕೊಕ್
ಇನ್ನು ಕಳೆದ ಮೋದಿ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದ ನಾಯಕರನ್ನು ನೂತನ ಸಂಪುಟದಿಂದ ಕೈಬಿಡಲಾಗಿದೆ. ಕಳೆದ ಮೋದಿ ಸರ್ಕಾರದಲ್ಲಿ ವಿತ್ತ ಇಲಾಖೆ ನಿರ್ವಹಿಸಿದ್ದ ಅರುಣ್ ಜೇಟ್ಲಿ, ವಿದೇಶಾಂಗ ಇಲಾಖೆ ನಿರ್ವಹಿಸಿದ್ದ ಸುಷ್ಮಾ ಸ್ವರಾಜ್, ಜೆಪಿ ನಡ್ಡಾ, ಯುವ ಜನ ಮತ್ತು ಕ್ರೀಡಾ ಇಲಾಖೆ ನಿರ್ವಹಿಸಿದ್ದ ರಾಜ್ಯವರ್ಧನ್ ಸಿಂಗ್ ರಾಥೋಡ್, ರೈಲ್ವೇ ಇಲಾಖೆ ನಿರ್ವಹಿಸಿದ್ದ ಸುರೇಶ್ ಪ್ರಭು, ಮೇನಕಾ ಗಾಂಧಿ, ಮಹೇಶ್ ಶರ್ಮಾ, ಮನೋಜ್ ಸಿನ್ಹಾ, ವಿಜಯ್ ಗೋಯಲ್, ಎಸ್ ಎಸ್ ಅಹ್ಲುವಾಲಿಯಾ, ಜಯಂತ್ ಸಿನ್ಹಾ, ಉಮಾ ಭಾರತಿ, ರಾಧಾ ಮೋಹನ್ ಸಿಂಗ್, ಬಂಡಾರು ದತ್ತಾತ್ರೆಯ, ರಾಜೀವ್ ಪ್ರತಾಪ್ ರೂಡಿ, ಕೆ ಅಲ್ಫಾನ್ಸ್, ಪಿ ರಾಧಾಕೃಷ್ಣನ್, ರಾಮ್ ಕೃಪಾಲ್ ಯಾದವ್, ಹರಿಬಾಯಿ ಚೌಧರಿ, ಸುದರ್ಶನ್ ಭಗತ್, ಎಸ್ ಆರ್ ಭಾಮ್ರೆ, ಅನಂತ್ ಕುಮಾರ್ ಹೆಗಡೆ ಮತ್ತು ರಮೇಶ್ ಜಿಗಜಿಣಗಿ ಅವರನ್ನು ಸಂಪುಟದಿಂದ ಕೈ ಬಿಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


