2 ವಾರಗಳ ಹಿಂದೆ ಮದುವೆ ಮಾಡಿಸಿದ್ದ ಪುರೋಹಿತನ ಜೊತೆ ನವವಧು ಪರಾರಿ!
ಮದುವೆ ಮಾಡಿಸಿದ್ದ ಪುರೋಹಿತನ ಜೊತೆಯೇ ನವ ವಿವಾಹಿತೆ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಸಿರೋಂಜ್ ನಲ್ಲಿ ನಡೆದಿದೆ...

Published On :
ಸಿರೋಂಜ್: ಮದುವೆ ಮಾಡಿಸಿದ್ದ ಪುರೋಹಿತನ ಜೊತೆಯೇ ನವ ವಿವಾಹಿತೆ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಸಿರೋಂಜ್ ನಲ್ಲಿ ನಡೆದಿದೆ.
ಎರಡು ವಾರಗಳ ಹಿಂದೆ ಅಂದರೇ ಮೇ 7 ರಂದು ಪರಾರಿಯಾದ ನವವಿವಾಹಿತೆಯ ಮದುವೆಯಾಗಿತ್ತು. ಮೇ 23 ರಂದು ಆಕೆ ಪುರೋಹಿತನ ಜೊತೆಯೇ ಓಡಿ ಹೋಗಿದ್ದಾಳೆ. ಮೇ 23 ರಂದು ಆತ ಮತ್ತೊಂದು ಮದುವೆ ಮಾಡಿಸಿದ್ದ, ಅದಾದ ನಂತರ ಅವರಿಬ್ಬರ ಬಗ್ಗೆ ಸುಳಿವಿಲ್ಲ, ಎಲ್ಲಿದ್ದಾರೆ ಎಂಬ ಬಗ್ಗೆಯೂ ಮಾಹಿತಿಯಿಲ್ಲ,
ವಿವಾಹದ ನಂತರದ ಶಾಸ್ತ್ರಗಳನ್ನು ನಡೆಸುವ ಸಲುವಾಗಿ ತವರು ಮನೆಗೆ ಆಗಮಿಸಿದ್ದ ನವ ವಿವಾಹಿತೆ ಕೂಡ ಮೇ 23 ರಿಂದ ನಾಪತ್ತೆಯಾಗಿದ್ದಾಳೆ, ಈ ಸಂಬಂಧ ವಧುವಿನ ಮನೆಯವರು ದೂರು ದಾಖಲಿಸಿದ್ದಾರೆ,. ಪುರೋಹಿತನಿಗೆ ಈಗಾಗಲೇ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ, ಒಂದೂವರೆ ಲಕ್ಷ ರು ಮೌಲ್ಯದ ಚಿನ್ನಾಭರಣ ಮತ್ತು 30 ಸಾವಿರ ರು ಹಣದ ಜೊತೆ ವಧು ಪರಾರಿಯಾಗಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


