ಮುಂದಿನ 5 ವರ್ಷಗಳು ನಮಗೆ ಅತ್ಯಂತ ಮಹತ್ವ: ನಿಯೋಜಿತ ಪ್ರಧಾನಿ ಮೋದಿ
ವಿಶ್ವದ ವ್ಯವಸ್ಥೆಯಲ್ಲಿ ಭಾರತ ಕಳೆದುಕೊಂಡ ಸ್ಥಾನವನ್ನು ಮತ್ತೆ ಪಡೆಯಲು ಲೋಕಸಭೆ ...

Published On :
ಅಹಮದಾಬಾದ್: ವಿಶ್ವದ ವ್ಯವಸ್ಥೆಯಲ್ಲಿ ಭಾರತ ಕಳೆದುಕೊಂಡ ಸ್ಥಾನವನ್ನು ಮತ್ತೆ ಪಡೆಯಲು ಲೋಕಸಭೆ ಚುನಾವಣೆಯಲ್ಲಿ ದೇಶದ ಜನರು ಸ್ಪಷ್ಟ ತೀರ್ಪು ನೀಡಿ ನಮಗೆ ಮತ್ತೊಮ್ಮೆ ಅವಕಾಶ ನೀಡಿದ್ದಾರೆ ಎಂದು ನಿಯೋಜಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ ನ ಬಿಜೆಪಿ ಘಟಕ ನಿನ್ನೆ ಅಹಮದಾಬಾದ್ ನಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಕಂಡರು ಸಹ ಅಹಂಕಾರದಿಂದ ಮೆರೆಯದೆ ವಿನಮ್ರತೆಯಿಂದ ನಡೆದುಕೊಳ್ಳುವಂತೆ ನೂತನ ಸಂಸದರಿಗೆ ಕಿವಿಮಾತು ಹೇಳಿದರು.
ಭಾರತ ಮತ್ತು ವಿಶ್ವದಲ್ಲಿ ತೆಗೆದುಕೊಂಡರೆ ಮುಂದಿನ 5 ವರ್ಷಗಳ ಸಮಯ ಅತ್ಯಂತ ಮಹತ್ವದ್ದಾಗಿರುತ್ತದೆ. ಅದೃಷ್ಟವಶಾತ್, ನಮಗೆ ಈ ಬಾರಿ ಸ್ಪಷ್ಟ ಸಂಪೂರ್ಣ ಬಹುಮತ ಸಿಕ್ಕಿದೆ, ಅದರ ಜೊತೆಗೆ ಎನ್ ಡಿಎ ಮೈತ್ರಿಕೂಟಗಳ ಬೆಂಬಲ ಕೂಡ ಇದೆ. 1942ರಿಂದ 1947ರವರೆಗೆ ಭಾರತದ ಇತಿಹಾಸದಲ್ಲಿ ಮಹತ್ವದ್ದಾಗಿದ್ದಂತೆ ಮುಂದಿನ 5 ವರ್ಷಗಳ ಸಮಯ ಅತ್ಯಂತ ಪ್ರಮುಖವಾಗಿರುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


