ದೇಶ

ವಿಜಯೋತ್ಸವದ ಬೆನ್ನಲ್ಲೇ ಹರಿದ ನೆತ್ತರು, ಅಮೇಥಿಯಲ್ಲಿ ದುಷ್ಕರ್ಮಿಗಳಿಂದ ಸ್ಮೃತಿ ಇರಾನಿ ಆಪ್ತನ ಗುಂಡಿಕ್ಕಿ ಹತ್ಯೆ

ವಿಜಯೋತ್ಸವದ ಬೆನ್ನಲ್ಲೇ ಹರಿದ ನೆತ್ತರು, ಅಮೇಥಿಯಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಸ್ಮೃತಿ ಇರಾನಿ ಆಪ್ತನ ಗುಂಡಿಕ್ಕಿ ಹತ್ಯೆ

ವಿಜಯೋತ್ಸವದ ಬೆನ್ನಲ್ಲೇ ಹರಿದ ನೆತ್ತರು, ಅಮೇಥಿಯಲ್ಲಿ ದುಷ್ಕರ್ಮಿಗಳಿಂದ ಸ್ಮೃತಿ ಇರಾನಿ ಆಪ್ತನ ಗುಂಡಿಕ್ಕಿ ಹತ್ಯೆ
ಸುರೇಂದ್ರ ಸಿಂಗ್
Published On :
ಅಮೇಥಿ: ಆಘಾತಕಾರಿ ಘಟನೆಯೊಂದರಲ್ಲಿ ಲೋಕಸಭೆ ಚುನಾವಣೆ ಗೆಲುವಿನ ಸಂಭ್ರಮಾಚರಣೆಯ ಬೆನಲ್ಲೇ ಬಿಜೆಪಿ ಸ್ಮೃತಿ ಇರಾನಿ ಆಪ್ತನೊಬ್ಬನನ್ನು ಅಪರಿಚಿತರು ಗುಂಡು ಹಾರಿಸಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದೆ.
ಸ್ಮೃತಿ ಇರಾನಿ ಬೆಂಬಲಿಗರಾದ ಸುರೇಂದ್ರ ಸಿಂಗ್ ಅವರನ್ನು ಶನಿವಾರ ತಡರಾತ್ರಿ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಲೋಕಸಭೆ ಚುನಾವಣೆ ವೇಳೆ ಸುರೇಂದ್ರ ಸಿಂಗ್ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಪರ ಪ್ರಚಾರ ಮಡಿದ್ದರು.
ಅಮೇಥಿಯ ಬರೌಲಿಯಾ ಗ್ರಾಮದ ಪಕ್ಷದ ಮುಖ್ಯಸ್ಥರಾಗಿದ್ದ ಸುರೇಂದ್ರ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದರು,.
ಅಮೇಥಿಯ ಜಾವೀ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆಸಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.