ಉಗ್ರರ ದಮನಕ್ಕೆ ಬ್ರಹ್ಮಾಸ್ತ್ರ: ರಿಸ್ಯಾಟ್-2ಬಿ ರೇಡಾರ್ ಇಮೇಜಿಂಗ್ ಉಪಗ್ರಹ ಉಡಾವಣೆ ಯಶಸ್ವಿ!
ಗಡಿಯಲ್ಲಿ ಉಗ್ರರ ಕಾರ್ಯ ಚಟುವಟಿಕೆ ಸೇರಿದಂತೆ ಭೂಮಿಯ ಮೇಲೆ ನಿಗಾ ಇಡುವ ರೇಡಾರ್ ಇಮೇಜಿಂಗ್ ಪರಿವೀಕ್ಷಕ ಉಪಗ್ರಹ ರಿಸ್ಯಾಟ್-2ಬಿಯನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.

Published On :
ಶ್ರೀಹರಿಕೋಟ: ಗಡಿಯಲ್ಲಿ ಉಗ್ರರ ಕಾರ್ಯ ಚಟುವಟಿಕೆ ಸೇರಿದಂತೆ ಭೂಮಿಯ ಮೇಲೆ ನಿಗಾ ಇಡುವ ರೇಡಾರ್ ಇಮೇಜಿಂಗ್ ಪರಿವೀಕ್ಷಕ ಉಪಗ್ರಹ ರಿಸ್ಯಾಟ್-2ಬಿಯನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಬುಧವಾರ ಬೆಳಗ್ಗೆ 5.30ರ ಸುಮಾರಿಗೆ ಪಿಎಸ್‌ಎಲ್‌ವಿ-ಸಿ46 ರಾಕೆಟ್ ರಿಸ್ಯಾಟ್-2ಬಿ ಹೊತ್ತ ಉಡಾವಣೆಯಾಗಿದ್ದು ಯಶಸ್ವಿಯಾಗಿ ಕಕ್ಷೆ ಸೇರಿದೆ.
ಬಾಹ್ಯಾಕಾಶದಿಂದ ಭಾರತದ ಮೇಲೆ ನಿಗಾ ಇರಿಸಬಲ್ಲ ಸಾಮರ್ಥ್ಯದ ಆರ್ಐಎಸ್ಎಟಿ(ರಿಸ್ಯಾಟ್-2ಬಿ) 615 ಕೆಜಿ ತೂಕ ಹೊಂದಿದೆ. ಕೃಷಿ, ಅರಣ್ಯ ಪ್ರದೇಶ ಸಂರಕ್ಷಣೆ ಮತ್ತು ನೈಸರ್ಗಿಕ ವಿಕೋಪ ನಿರ್ವಹಣೆಗೆ ರಿಸ್ಯಾಟ್ ಸಹಕಾರಿಯಾಗಲಿದೆ. ಇನ್ನು ಉಡಾವಣೆಯಾದ 15 ನಿಮಿಷಗಳಲ್ಲಿ ರಿಸ್ಯಾಟ್-2ಬಿ ಉಪಗ್ರಹವು ಕಕ್ಷೆ ಸೇರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ISROಇಸ್ರೋPSLV-C46Earth observation SatelliteRISAT-2Bಪಿಎಸ್‌ಎಲ್‌ವಿ-ಸಿ46ರಿಸ್ಯಾಟ್-2ಬಿಭೂ ಪರಿವೀಕ್ಷಣೆ ಉಪಗ್ರಹ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


