ಗೋಧ್ರಾ ಹತ್ಯಾಕಾಂಡವನ್ನು ಯಾರಾದರೂ ಮೋದಿಗೆ ತಳುಕುಹಾಕಿದರೆ ಏನಾಗುತ್ತೆ?: ಅಮರಿಂದರ್ ಸಿಂಗ್
1984 ರ ಸಿಖ್ ವಿರೋಧಿ ದಂಗೆಯನ್ನು ರಾಜೀವ್ ಗಾಂಧಿ ಅವರಿಗೆ ತಳುಕು ಹಾಕಿದ್ದ ಪ್ರಧಾನಿ ನರೇಂದ್ರ ಮೋದಿ ನಡೆಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Published On :
ಚಂಡೀಗಢ: 1984 ರ ಸಿಖ್ ವಿರೋಧಿ ದಂಗೆಯನ್ನು ರಾಜೀವ್ ಗಾಂಧಿ ಅವರಿಗೆ ತಳುಕು ಹಾಕಿದ್ದ ಪ್ರಧಾನಿ ನರೇಂದ್ರ ಮೋದಿ ನಡೆಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿಂಖ್ ದಂಗೆಗೂ ಗುಜರಾತ್ ನಲ್ಲಿ ಮೋದಿ ಸಿಎಂ ಆಗಿದ್ದಾಗ ನಡೆದ ಗೋಧ್ರಾ ದಂಗೆಗೂ ಹೋಲಿಕೆ ಮಾಡಿರುವ ಅಮರಿಂದರ್ ಸಿಂಗ್ ಗೋಧ್ರಾ ಹತ್ಯಾಕಾಂಡವನ್ನು ಮೋದಿಗೆ ತಳುಕು ಹಾಕಿದರೆ ಏನಾಗುತ್ತೆ? ಎಂದು ಪ್ರಶ್ನಿಸಿದ್ದಾರೆ.
1984 ರ ಸಿಖ್ ವಿರೋಧಿ ದಂಗೆಗೆ ರಾಜೀವ್ ಗಾಂಧಿ ಅವರನ್ನು ಹೊಣೆ ಮಾಡುವುದು ತಪ್ಪು, ಗೋಧ್ರಾ ಗಲಭೆಗೆ ಮೋದಿಯನ್ನು ಯಾರಾದರೂ ಹೊಣೆ ಮಾಡಿದರೆ ಹೇಗಿರುತ್ತೆ? ಚುನಾವಣೆ ಗೆಲ್ಲುವುದಕ್ಕಾಗಿ ಪ್ರಧಾನಿಯೊಬ್ಬರು ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


