ದೇಶ

ಪಾಕಿಸ್ತಾನದಿಂದ ಬಂದ ಜಾರ್ಜಿಯಾ ವಿಮಾನದಿಂದ ಗಡಿ ಉಲ್ಲಂಘನೆ: ಜೈಪುರದಲ್ಲಿ ಬಲವಂತದಿಂದ ಇಳಿಸಿದ ಐಎ ಎಫ್

ಜಾರ್ಜಿಯಾದ ಸರಕು ಸಾಗಣೆ ವಿಮಾನವೊಂದು ಭಾರತದ ವಾಯುಗಡಿಯನ್ನು ಉಲ್ಲಂಘಿಸಿ ಫಾಕಿಸ್ತಾನದ ಮೂಲಕ ದೇಶವನ್ನು ಪ್ರವೇಶಿಸಿದ್ದು...

ಪಾಕಿಸ್ತಾನದಿಂದ ಬಂದ ಜಾರ್ಜಿಯಾ ವಿಮಾನದಿಂದ ಗಡಿ ಉಲ್ಲಂಘನೆ: ಜೈಪುರದಲ್ಲಿ ಬಲವಂತದಿಂದ ಇಳಿಸಿದ ಐಎ ಎಫ್
ಆಂಟೊನೊವ್ ಎಎನ್-12 ಸರಕು ವಿಮಾನ
Published On :
ನವದೆಹಲಿ: ಜಾರ್ಜಿಯಾದ ಸರಕು ಸಾಗಣೆ ವಿಮಾನವೊಂದು ಭಾರತದ ವಾಯುಗಡಿಯನ್ನು ಉಲ್ಲಂಘಿಸಿ ಫಾಕಿಸ್ತಾನದ ಮೂಲಕ ದೇಶವನ್ನು ಪ್ರವೇಶಿಸಿದ್ದು ಇದನ್ನು ಭಾರತೀಯ ವಾಯುಪಡೆ ಜೈಪುರ ವಿಮಾನ ನಿಲ್ದಾಣದಲ್ಲಿ ಬಲವಂತದಿಂದ ಇಳಿಸಿರುವ ಘಟನೆ ನಡೆದಿದೆ.
ಜಾರ್ಜಿಯಾದ ಆಂಟೊನೊವ್ ಎಎನ್-12 ಬೃಹತ್ ಸರಕು ಸಾಗಣೆ ವಿಮಾನವನ್ನು ಭಾರತೀಯ ವಾಯುಪಡೆ ರಾಜಸ್ಥಾನದ ಜೈಪುರದಲ್ಲಿ ಇಳಿಸಿದೆ ಎಂದು ಅಧಿಕೃತ ಮೂಲಗಳು ಹೇಳಿದೆ.
ಐಎಎಫ್ ನ ವಾಯು ರಕ್ಷಣಾ ವಿಮಾನದಿಂದ ವಿಮಾನವನ್ನು ಜೈಪುರ್ ವಿಮಾನ ನಿಲ್ದಾಣದಲ್ಲಿ ಇಳಿಸಲು ಬಲವಂತದ ಸೂಚನೆ ನಿಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವಿಮಾನವು ಉತ್ತರ ಗುಜರಾತ್ ನಲ್ಲಿ ಅಪರಿಚಿತ ಸ್ಥಳದ ಮೂಲಕ ಭಾರತೀಯ ವಾಯು ಪ್ರದೇಶವನ್ನು ಪ್ರವೇಶಿಸಿದೆ. ಇದನ್ನು ಗಮನಿಸಿದ ವಾಯುಸೇನೆ  ತಕ್ಷಣ ಎಚ್ಚರಗೊಂಡು ಐಎಎಫ್ ಏರ್ ಡಿಫೆನ್ಸ್ ಏರ್ಕ್ರಾಫ್ಟ್ ಮೂಲಕ ವಿಮಾನವನ್ನು ಪ್ರತಿಬಂಧಿಸಿ ಜೈಪುರ ವಿಮಾನ ನಿಲ್ದಾಣದಲ್ಲಿ ಇಳಿಸಿದೆ."ಐಎಎಫ್ ಹೇಳಿಕೆಯಲ್ಲಿ ತಿಳಿಸಿದೆ.
ರಾಡಾರ್ ಗಳು ಭಾರತದ ಗಡಿ ಪ್ರವೇಶಿಸುವ ವಿಮಾನವನ್ನು ಪತ್ತೆ ಹಚ್ಚಿದ ನಂತರ ಸರಕು ವಿಮಾನವನ್ನು ಪ್ರತಿಬಂಧಿಸಲು ಐಎಎಫ್ ಎರಡು ಸುಖೋಯ್ ಸು -30 ಫೈಟರ್ ಜೆಟ್ ಗಳನ್ನು ನಿಯೋಜಿಸಿತ್ತು.
ಜಾರ್ಜಿಯಾದಿಂದ ದೆಹಲಿಗೆ ಬರಬೇಕಿದ್ದ ವಿಮಾನ ಕರಾಚಿಯ್ಯಿಂದ ಮಾರ್ಗ ಬದಲಿಸಿ ಉತ್ತರ ಗುಜರಾತ್ ನ ಅಪರಿಚಿತ ಪ್ರದೇಶದಲ್ಲಿ ಭಾರತವನ್ನು ಪ್ರವೇಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.