ದೇಶ

ಗಂಗಾ ರಕ್ಷಣೆಗೆ ಆಗ್ರಹಿಸಿದ್ದ ಸ್ವಾಮಿ ಆತ್ಮಬೋಧಾನಂದರ 194 ದಿನಗಳ ಉಪವಾಸ ಅಂತ್ಯ

ಗಂಗಾನದಿ ಶುದ್ದೀಕರಣಕ್ಕೆ ಆಗ್ರಹಿಸಿ ಗಂಗೆಯ ರಕ್ಷಣೆಗಾಗಿ 194 ದಿನಗಳಿಂದ ಉಪವಾಸ ನಿರತವಾಗಿದ್ದ ಸ್ವಾಮಿ ಆತ್ಮಬೋಧಾನಂದ ತಮ್ಮ ಉಪವಾಸ ಅಂತ್ಯಗೊಳಿಸಿದ್ದಾರೆ.

ಗಂಗಾ ರಕ್ಷಣೆಗೆ ಆಗ್ರಹಿಸಿದ್ದ ಸ್ವಾಮಿ ಆತ್ಮಬೋಧಾನಂದರ 194 ದಿನಗಳ ಉಪವಾಸ ಅಂತ್ಯ
ಸ್ವಾಮಿ ಆತ್ಮಬೋಧಾನಂದ
Published On :
ಹರಿದ್ವಾರ: ಗಂಗಾನದಿ ಶುದ್ದೀಕರಣಕ್ಕೆ ಆಗ್ರಹಿಸಿ ಗಂಗೆಯ ರಕ್ಷಣೆಗಾಗಿ 194 ದಿನಗಳಿಂದ ಉಪವಾಸ ನಿರತವಾಗಿದ್ದ ಸ್ವಾಮಿ ಆತ್ಮಬೋಧಾನಂದ  ತಮ್ಮ ಉಪವಾಸ ಅಂತ್ಯಗೊಳಿಸಿದ್ದಾರೆ.
ನ್ಯಾಷನಲ್ ಮಿಷನ್ ಆಫ್ ಕ್ಲೀನ್ ಗಂಗಾ (ಎನ್ಎಂಸಿಜಿ) ನೀಡಿದ ಲಿಖಿತ ಭರವಸೆಯ ಬಳಿಕ ಅವರು ತಮ್ಮ ಉಪವಾಸಕ್ಕೆ ಮಂಗಳ ಹಾಡಿದ್ದಾರೆ.
"ಎನ್ಎಂಸಿಜಿ ನಿರ್ದೇಶಕ ಜನರಲ್ ರಾಜೀವ್ ರಂಜನ್ ಎಪ್ರಿಲ್ 25 ರಂದು ನನ್ನನ್ನು ಭೇಟಿ ಮಾಡಿದ್ದರು. ಆ ವೇಳೆ ನಾವು ಚರ್ಚೆ ನಡೆಸಿದ್ದು ಅಣೆಕಟ್ಟುಗಳ ನಿರ್ಮಾಣ ಸಂಬಂಧ ಕ್ರಮ ತೆಗೆದುಕೊಳ್ಲಲಾಗುತ್ತದೆ,  ಗಣಿಗಾರಿಕೆಯ ವಿರುದ್ಧ ಸಹ ಕ್ರಮ ಜರುಗಿಸಲಾಗುವುದು,  ಎಂದು ಲಿಖಿತ ಭರವಸೆ ನೀಡಿದ್ದಾರೆ. ಇದು ಸರ್ಕಾರ ಹಾಗೂ ಎನ್ಎಂಸಿಜಿ ಯ ಸಕಾರಾತ್ಮಕ ಉಪಕ್ರಮವಾಗಿದ್ದು, ಇದೀಗ ನಾನು ನನ್ನ ಉಪವಾಸವನ್ನು ಕೈಬಿಟ್ಟಿದ್ದೇನೆ" ಆತ್ಮಬೋಧಾನಂದ  ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.