ಆಧಾರ್ ಜತೆ ಪ್ಯಾನ್ ಲಿಂಕ್ ಗಡುವು 6 ತಿಂಗಳು ವಿಸ್ತರಣೆ
ಆಧಾರ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಇದ್ದ ಮಾರ್ಚ್ 31ರ ಗಡುವನ್ನು ಕೇಂದ್ರ ಸರ್ಕಾರ ಭಾನುವಾರ ಮತ್ತೆ ಆರು ತಿಂಗಳು ವಿಸ್ತರಣೆ ಮಾಡಿದೆ.

Published On :
ನವದೆಹಲಿ: ಆಧಾರ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಇದ್ದ ಮಾರ್ಚ್ 31ರ ಗಡುವನ್ನು ಕೇಂದ್ರ ಸರ್ಕಾರ ಭಾನುವಾರ ಮತ್ತೆ ಆರು ತಿಂಗಳು ವಿಸ್ತರಣೆ ಮಾಡಿದೆ.
ಈ ಮುಂಚೆ ಮಾರ್ಚ್ 31ರೊಳಗೆ ಆಧಾರ್-ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯ ಎಂದು ಆದಾಯ ತೆರಿಗೆ ಇಲಾಖೆಯು ಮಾಧ್ಯಮಗಳಿಗೆ ನೀಡಿದ ಜಾಹೀರಾತಿನಲ್ಲಿ ತಿಳಿಸಿತ್ತು. ಇದೀಗ ಈ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
ಆಧಾರ್ ಜೊತೆ ಪ್ಯಾನ್ ಜೋಡಣೆ ಮಾಡುವತನಕ ತೆರಿಗೆ, ಬ್ಯಾಂಕಿಂಗ್, ಹಣಕಾಸು ವ್ಯವಹಾರಗಳಿಗೆ ತೊಡಕಾಗುವ ಅವಕಾಶಗಳಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಈ ಮೊದಲು ಪ್ಯಾನ್-ಆಧಾರ್ ಜೋಡಣೆಗೆ 2018ರ ಜೂ.30 ಕಡೆಯ ದಿನವಾಗಿತ್ತು. ನಂತರ ಇದನ್ನು ಹಲವು ಬಾರಿ ವಿಸ್ತರಿಸಿ ಕೊನೆಗೆ 2019ರ ಮಾರ್ಚ್ 31 ರೊಳಗೆ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಲು ಸೂಚಿಸಲಾಗಿತ್ತು. ಈಗ ಮತ್ತೆ ಅದನ್ನು ವಿಸ್ತರಣೆ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


