ಆನೆಯನ್ನು ಕಟ್ಟಿಹಾಕಿ ಹೊಡೆದು ಮಾರಣಾಂತಿಕ ಹಿಂಸೆ; ಮೂಕರೋಧನೆಯ ವಿಡಿಯೋ ವೈರಲ್!
ದೈತ್ಯ ಆನೆಯನ್ನು ಸರಪಳಿಯಿಂದ ಕಟ್ಟಿಹಾಕಿ ಹೊಡೆದು ಮಾರಣಾಂತಿಕವಾಗಿ ಹಿಂಸೆ ನೀಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Published On :
ತ್ರಿಶೂರ್: ದೈತ್ಯ ಆನೆಯನ್ನು ಸರಪಳಿಯಿಂದ ಕಟ್ಟಿಹಾಕಿ ಹೊಡೆದು ಮಾರಣಾಂತಿಕವಾಗಿ ಹಿಂಸೆ ನೀಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇರಳದ ತ್ರಿಶೂರ್ ಜಿಲ್ಲೆಯಲ್ಲಿನ ದೇವಸ್ತಾನದ ಮಾಜಿ ಆನೆಯೊಂದನ್ನು ದುಷ್ಕರ್ಮಿಗಳು ಮರದ ದಿಮ್ಮಿಯನ್ನು ಬಳಸಿ ಕಾಲಿನ ಮೇಲೆ ಹೊಡೆದಿದ್ದಾರೆ. ನೋವಿನಿಂದ ಆನೆ ಜೋರಾಗಿ ಕೂಗಿಕೊಂಡರು ದುಷ್ಕರ್ಮಿಗಳ ಮನಸ್ಸು ಕರಗಲಿಲ್ಲ. ಕೊನೆಗೆ ಆನೆ ನೆಲದ ಮೇಲೆ ಬೀಳುವವರೆಗೂ ಆನೆಯನ್ನು ಹೊಡೆದಿದ್ದಾರೆ.
ತಾನು ಹೇಳಿದಂತೆ ಕೇಳಲಿಲ್ಲ ಎಂದು ಆನೆಗೆ ಹೊಡೆದಿರುವ ವಿಡಿಯೋವನ್ನು ವೈರಲ್ ಆಗಿದ್ದು ಇದನ್ನು ಗಮನಿಸಿದ ಏಷಿಯನ್ ಎಲಿಫೆಂಟ್ ಸೊಸೈಟಿಯ ಕಾರ್ಯಕರ್ತರು ಆನೆಯನ್ನು ರಕ್ಷಿಸಿ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಆನೆಗೆ ಹೊಡೆಯುತ್ತಿರುವ ವಿಡಿಯೋವನ್ನು ನೋಡಿದ ನೆಟಿಗರು ತೀವ್ರವಾಗಿ ಖಂಡಿಸಿದ್ದು ದುಷ್ಕರ್ಮಿಗಳ ನಡೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Karnan the gentle giant,once a temple elephant ,being mercilessly beaten up in thrissur ,kerala pic.twitter.com/hNNGF7VyID
—
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


