ಬಾರಾಮುಲ್ಲಾ ಆಯ್ತು ಈಗ ಬಂಡಿಪೋರಾ: ಮತ್ತೆ ಮೂವರು ಉಗ್ರರ ಹೆಡೆಮುರಿ ಕಟ್ಟಿದ ಸೇನೆ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನೆ ತೊಡ ತಟ್ಟಿ ನಿಂತಿದ್ದು, ಇಂದು ಮತ್ತೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ.

Published On :
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನೆ ತೊಡ ತಟ್ಟಿ ನಿಂತಿದ್ದು, ಇಂದು ಮತ್ತೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ.
ನಿನ್ನೆಯಷ್ಟೇ ಬಾರಾಮುಲ್ಲದಲ್ಲಿ ಸೈನಿಕರು ಇಬ್ಬರು ಉಗ್ರಗಾಮಿಗಳನ್ನು ಹೊಡೆದುರುಳಿಸಿದ್ದರು. ಇದಾದ ಕೇವಲ 12 ಗಂಟೆಯ ಅವಧಿಯಲ್ಲಿ ಮತ್ತೆ ಸೇನೆ ಮೂವರು ಉಗ್ರರ ಸೆದೆಬಡಿದಿದೆ.
ಕಾಶ್ಮೀರದ ಹಜಿನ್ ಮತ್ತು ಬಂಡಿಪೋರಾದಲ್ಲಿ ಸೈನಿಕರ ಮೇಲೆ ದಾಳಿ ನಡೆಸಿದ ಉಗ್ರರ ಮೇಲೆ ಪ್ರತಿದಾಳಿ ನಡೆಸಿದ ಸೇನೆ ಮೂವರು ಉಗ್ರರನ್ನು ಹೊಡೆದುಹಾಕಿದೆ. ನಿನ್ನೆ ಬಾರಾಮುಲ್ಲ ಜಿಲ್ಲೆಯ ಕಲಾಂತ್ರ ಕಂಡಿ ಕ್ರೀರಿ ಪ್ರದೇಶದಲ್ಲಿ ಉಗ್ರರನ್ನು ಹೊಡೆದು ಹಾಕಿದ್ದ ಸೇನೆ ಇಂದು ಬಾರಾಮುಲ್ಲಾದ ಮೀರ್ ಮೊಹಲ್ಲಾದಲ್ಲಿ ಉಗ್ರರನ್ನು ಹೊಡೆದು ಹಾಕಿದೆ.
ಇನ್ನು ಉಗ್ರರ ವಿರುದ್ಧ ಗುಂಡಿನ ಚಕಮಕಿಯಲ್ಲಿ ಸೇನೆಯ ಮೂವರು ಸೈನಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನುಶ್ರೀನಗರದ ಬದಾಮಿಬಾಘ್ ಕಂಟೋನ್ಮೆಂಟ್ ನಲ್ಲಿರುವ ಸೇನೆಯ 92 ಬೇಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian Armyಉಗ್ರರುಶ್ರೀನಗರSrinagarಜಮ್ಮು ಮತ್ತು ಕಾಶ್ಮೀರJammu and Kashmirterroristಭಾರತೀಯ ಸೇನೆBandipora encounterಬಂಡೀಪೋರಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


