12 ವರ್ಷದ ಬಾಲಕಿ ಮೇಲೆ ಚಿಕ್ಕಪ್ಪ, 3 ಸೋದರರಿಂದಲೇ ಗ್ಯಾಂಗ್ ರೇಪ್, ಅತ್ಯಾಚಾರದ ಬಳಿಕ ಶಿರಚ್ಛೇದ!
ಮಧ್ಯ ಪ್ರದೇಶ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಪ್ರಕರಣವನ್ನು ಬೇಧಿಸಿರುವ ಪೊಲೀಸರು ಬಾಲಕಿಯ ಚಿಕ್ಕಪ್ಪ ಮತ್ತು ಆಕೆಯ ಮೂವರ ಮಲ ಸಹೋದರರನ್ನು ಬಂಧಿಸಿದ್ದಾರೆ.

Published On :
ಭೋಪಾಲ್: ಮಧ್ಯ ಪ್ರದೇಶ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಪ್ರಕರಣವನ್ನು ಬೇಧಿಸಿರುವ ಪೊಲೀಸರು ಬಾಲಕಿಯ ಚಿಕ್ಕಪ್ಪ ಮತ್ತು ಆಕೆಯ ಮೂವರ ಮಲ ಸಹೋದರರನ್ನು ಬಂಧಿಸಿದ್ದಾರೆ.
ಹೌದು ಕಳೆದವಾರ ಮಧ್ಯ ಪ್ರದೇಶದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಬಾಲಕಿಯನ್ನು ಆಕೆಯ ಚಿಕ್ಕಪ್ಪ ಮತ್ತು ಆತನ ಮೂವರು ಮಕ್ಕಳೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಬಳಿಕ ಆಕೆಯ ಶಿರಚ್ಛೇದ ಮಾಡಿದ್ದಾರೆ ಎಂದು ತಿಳಿದುಬಂದಿದೆ. 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು ಆಕೆಯ ಸ್ವಂತ ಚಿಕ್ಕಪ್ಪ ಮತ್ತು ಸೋದರರೇ ಎಂಬ ವಿಚಾರ ಬೆಳಕಿಗೆ ಬಂದಿದೆ. ಇನ್ನೂ ಧಾರುಣವೆಂದರೆ ಬಾಲಕಿ ಮೇಲಿನ ಅತ್ಯಾಚಾರಕ್ಕೆ ಆಕೆಯ ಚಿಕ್ಕಮ್ಮನೂ ಕೂಡ ನೆರವಾಗಿದ್ದ ಭೀಬತ್ಸ ಸತ್ಯವನ್ನು ಪೊಲೀಸರು ಹೊರ ಹಾಕಿದ್ದಾರೆ.
ಬಾಲಕಿಯ ಹತ್ಯೆ ಬಳಿಕ ಇದೇ ಕುಟುಂಬ ತಮ್ಮ ಎದುರಾಳಿ ಕುಟುಂಬದ ಮೇಲೆ ಆರೋಪ ಮಾಡಿತ್ತು. ಆದರೆ ಈಗ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಇಡೀ ಕುಟುಂಬಲನ್ನು ಬಂಧಿಸಿದ್ದಾರೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಈ ಘೋರ ಘಟನೆನಡೆದಿದ್ದು, ಪೊಲೀಸರು ಬಾಲಕಿಯ ಚಿಕ್ಕಪ್ಪ ಮತ್ತು ಇಬ್ಬರು ಸೋದರರನ್ನು ಬಂಧಿಸಿದ್ದಾರೆ. ಇನ್ನು ಮತ್ತೋರ್ವ ಆರೋಪಿ ಹಿರಿಯ ಸೋದರ ನಾಪತ್ತೆಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಅಮಾನುಷ ಕೃತ್ಯಕ್ಕೆ ಸಹಾಯವಾಗಿದ್ದ ಚಿಕ್ಕಮ್ಮನ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಗಿದ್ದೇನು?
12 ವರ್ಷದ ಬಾಲಕಿಯ ಮೇಲೆ ನಾಲ್ವರು ದುರುಳರು ಅನೈಸರ್ಗಿಕ ಲೈಂಗಿಕ ಸಂಪರ್ಕ ಸಾಧಿಸಿರುವುದು ಶವಪರೀಕ್ಷೆಯಿಂದ ಗೊತ್ತಾಗಿದೆ. ಬಾಲಕಿಯ 22 ವರ್ಷದ ಹಿರಿಯಣ್ಣ ಆಕೆಯನ್ನು ಶಾಲೆಗೆ ಕರೆದೊಯ್ಯದೆ ತನ್ನ ಚಿಕ್ಕಪ್ಪನ ಮನೆಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಆತ ಮೊದಲು ಅತ್ಯಾಚಾರ ಎಸಗುತ್ತಾನೆ. ನಂತರ 17 ಮತ್ತು 19 ವರ್ಷದ ಇತರಿಬ್ಬರು ಸೋದರರೂ ತಮ್ಮ ತಂಗಿಯನ್ನು ರೇಪ್ ಮಾಡುತ್ತಾರೆ. ಅದಾದ ಬಳಿಕ 40 ವರ್ಷದ ಚಿಕ್ಕಪ್ಪ ಕೂಡ ಅತ್ಯಾಚಾರ ಎಸಗುತ್ತಾನೆ.
ನಂತರ ಬಾಲಕಿಯು ಇಲ್ಲಿ ನಡೆದ ಘಟನೆಯ ಬಗ್ಗೆ ಅಪ್ಪ-ಅಮ್ಮನಿಗೆ ತಿಳಿಸುತ್ತೇನೆ ಎಂದಾಗ ಆಕೆಯ ದುಷ್ಟ ಸೋದರರು ಕೊಡಲಿಯಿಂದ ಆಕೆಯ ತಲೆ ಕಡಿದು ತೋಟವೊಂದರಲ್ಲಿ ಬಿಸಾಡುತ್ತಾರೆ. ಬಾಲಕಿಯ ಮೇಲೆ ಅತ್ಯಾಚಾರ ನಡೆಯುವಾಗ ಅಲ್ಲಿಯೇ ಇದ್ದ ಆಕೆಯ ಚಿಕ್ಕಮ್ಮ ದುರುಳರನ್ನು ತಡೆಯುವ ಪ್ರಯತ್ನ ಮಾಡುವುದಿಲ್ಲ. ಬದಲಾಗಿ, ಅತ್ಯಾಚಾರಕ್ಕೆ ಸಹಕಾರ ನೀಡುತ್ತಾಳೆ. ಊರಿನ ಸ್ಥಳೀಯ ಕುಟುಂಬವೊಂದು ಹಳೇ ಜಿದ್ದಿನಲ್ಲಿ ಈ ಹುಡುಗಿಯ ಅತ್ಯಾಚಾರ ಮತ್ತು ಕೊಲೆ ಮಾಡಿದೆ ಎಂದು ಕಥೆ ಕಟ್ಟಲು ಆಕೆಯೇ ಸಲಹೆ ನೀಡುತ್ತಾಳೆ. ಶಾಲೆಗೆ ಹೋಗಿದ್ದ ತನ್ನ ಮಗಳು ಬರುವುದು ತೀರಾ ತಡವಾದಾಗ ಪೋಷಕರು ದೂರು ನೀಡಿರುತ್ತಾರೆ. ಆಗ ಪೊಲೀಸರಿಗೆ ರುಂಡರಹಿತ ಬಾಲಕಿಯ ದೇಹ ಸಿಗುತ್ತದೆ. ಆಗ ಪ್ರಕರಣ ಬಯಲಿಗೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಂಕೆಯ ಮೇರೆಗೆ ಬಾಲಕಿಯ ಚಿಕ್ಕಪ್ಪನನ್ನು ಬಂಧಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


