ಪ್ರಧಾನಿ ಮೋದಿ 'ಉದ್ಯಮಿಗಳ ಕಾವಲುಗಾರ': ಟ್ವೀಟ್ ಮಾಡಿ ಮತ್ತೆ ಟ್ರೋಲ್ ಗೆ ಗುರಿಯಾದ ನಟಿ ರಮ್ಯಾ!
ಪ್ರಧಾನಿ ನರೇಂದ್ರ ಮೋದಿ ಉದ್ಯಮಿಗಳ ಚೌಕಿದಾರ್ ಎಂದು ಟೀಕಿಸಿದ್ದ ನಟಿ, ಕಾಂಗ್ರೆಸ್ ಮುಖಂಡೆ ರಮ್ಯಾಳಿಗೆ ನೆಟಿಗರು ಟ್ವೀಟ್ ಮೂಲಕ ಟ್ರೋಲ್ ಮಾಡಿ ಕಾಲೆಳೆದಿದ್ದಾರೆ.

Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಉದ್ಯಮಿಗಳ ಚೌಕಿದಾರ್ ಎಂದು ಟೀಕಿಸಿದ್ದ ನಟಿ, ಕಾಂಗ್ರೆಸ್ ಮುಖಂಡೆ ರಮ್ಯಾಳಿಗೆ ನೆಟಿಗರು ಟ್ವೀಟ್ ಮೂಲಕ ಟ್ರೋಲ್ ಮಾಡಿ ಕಾಲೆಳೆದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾವಲುಗಾರನೇ ಕಳ್ಳ(ಚೌಕಿದಾರ್ ಚೋರ್ ಹೈ) ಎಂದು ಟೀಕಿಸಿದ್ದರು. ಈ ಟೀಕೆಗೆ ಪ್ರತಿಯಾಗಿ ಪ್ರಧಾನಿ ಮೋದಿ ಅವರು ನಾನೂ ಕಾವಲುಗಾರ(ಮೈ ಭೀ ಚೌಕಿದಾರ್) ಎಂದು ಟ್ವೀಟ್ ಅಭಿಯಾನ ಹರಿಬಿಟ್ಟು ಪ್ರತ್ಯುತ್ತರ ನೀಡಿದ್ದರು.
ಮೋದಿ ಜೀ ಟ್ವೀಟರ್ ಅಳಿಸಿದ್ದು ಯಾಕೇ? ಚೌಕಿದಾರ್ ಚೋರ್ ಹೈ ನೀವು ಚೌಕಿದಾರ್ ಆಗಿದ್ದರೇ(ಕಾವಲುಗಾರ) ನೀರವ್ ಮೋದಿ ಯಾಕಿಲ್ಲ? ಎಂದು ಅಣಕಿಸಿದ್ದಾರೆ.
ನೀವು ನಿಜವಾಗಿ ಚೌಕಿದಾರ್. ಉದ್ಯಮಿಗಳ ಚೌಕಿದಾರ್. ಅಂಬಾನಿ, ಲಲಿತ್ ಮೋದಿ, ವಿಜಯ್ ಮಲ್ಯ, ಮುಂತಾದ ಉದ್ಯಮಿಗಳ ರಕ್ಷಣೆ ಮಾಡುತ್ತಿದ್ದೀರಾ. ಲೂಟಿಕೋರರ ರಕ್ಷಣೆ ಮಾಡುತ್ತಿದ್ದಾರೆ ಎಂಬಂತೆ ಅವರ ಫೋಟೋಗಳನ್ನು ಎಡಿಟ್ ಮಾಡಿ, ಲೂಟಿ ಮಾಡಿದ ಹಣದ ಮಾಹಿತಿ ಸಮೇತ ಹಂಚಿಕೊಂಡಿದ್ದಾರೆ.
ಈ ಟ್ವೀಟ್ ಗೆ ನೆಟಿಗರು ಆಕ್ರೋಶಗೊಂಡು ವಿಜಯ್ ಮಲ್ಯ ಒಳ್ಳೆಯ ವ್ಯಕ್ತಿ ಹಾಗೂ ನನಗೆ ಗೊತ್ತಿರುವ ನಿಜವಾದ ವ್ಯಕ್ತಿತ್ವ ಅವರದ್ದು ಎಂಬ ರಮ್ಯಾರ ಹಳೇಯ ಟ್ವೀಟ್ ಅನ್ನು ನೆಟಿಗರು ಟ್ರೋಲ್ ಮಾಡಿ ಛೇಡಿಸಿದ್ದಾರೆ.
Modi ji why did you delete the tweet? Hahaha! #ChowkidaarChorHai Agar aap chowkidar ho sakte hain to Nirav Modi kyun nahin?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿCongressಕಾಂಗ್ರೆಸ್Ramyaರಮ್ಯಾPoliticsTwitterಟ್ವೀಟರ್Main Bhi Chowkidarನಾನೂ ಚೌಕಿದಾರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


