ಕೇರಳದಲ್ಲಿ ಕಾಂಗ್ರೆಸ್‌ಗೆ ಮತ್ತೆ ಹೊಡೆತ: ಶಶಿ ತರೂರ್ ಚಿಕ್ಕಪ್ಪ-ಚಿಕ್ಕಮ್ಮ ಬಿಜೆಪಿಗೆ ಸೇರ್ಪಡೆ
ಸೋನಿಯಾ ಆಪ್ತರಾಗಿದ್ದ ಕೇರಳ ಕಾಂಗ್ರೆಸ್ ಮುಖಂಡ ಟಾಮ್ ವಡಕ್ಕನ್ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿರುವ ಬೆನ್ನಲ್ಲೇ ಶುಕ್ರವಾರ ತಿರುವನಂತಪುರಂ ಸಂಸದ, ಕಾಂಗ್ರೆಸ್ ....

Published On :
ಕೊಚ್ಚಿನ್: ಸೋನಿಯಾ ಆಪ್ತರಾಗಿದ್ದ ಕೇರಳ ಕಾಂಗ್ರೆಸ್ ಮುಖಂಡ ಟಾಮ್ ವಡಕ್ಕನ್ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿರುವ ಬೆನ್ನಲ್ಲೇ ಶುಕ್ರವಾರ ತಿರುವನಂತಪುರಂ ಸಂಸದ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಸಮೀಪ ಸಂಬಂಧಿಗಳೂ ಸಹ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ.
ತರೂರ್ ಅವರ ಚಿಕ್ಕಮ ಹಾಗೂ ಚಿಕ್ಕಪ್ಪ ಇಂದು ಕೊಚ್ಚಿನ್ ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ತರೂರ್ ಅವರ ತಾಯಿಯ ಸೋದರಿ ಶೋಭನಾ ಶಶಿಕುಮಾರ್ ಹಾಗೂ ಅವರ ಪತಿ ಶಶಿಕುಮಾರ್ ಸೇರಿದಂತೆ ಇತರೆ 13 ಮಂದಿಯನ್ನು ಕೇರಳ ಬಿಜೆಪಿ ಅಧ್ಯಕ್ಷ ಪಿಎಸ್ ಶ್ರಿಧರನ್ ಪಿಳ್ಳೈ ಕಮಲ ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಬಿಜೆಪಿ ಸದಸ್ಯತ್ವ ಪಡೆದ ಬಳಿಕ ಮಾತನಾಡಿದ ಶೋಭನಾ ಹಾಗೂ ಶಶಿಕುಮಾರ್ ದಂಪತಿಗಳು ತಾವು ಅನೇಕ ವರ್ಷಗಳಿಂದಲೂ ಭಾರತೀಯ ಜನತಾ ಪಕ್ಷದ ಸಿದ್ಧಾಂತವನ್ನು ಅನುಸರಿಸುತ್ತಾ ಬಂದಿರುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


