ದೇಶ

ನಾನು ರಾಜಕೀಯದಲ್ಲಿ ಯಾರೋಂದಿಗೂ ವೈರತ್ವ ಇಟ್ಟುಕೊಂಡಿಲ್ಲ: ನಿತಿನ್ ಗಡ್ಕರಿ

ರಾಜಕೀಯದಲ್ಲಿ ನಾನು ಯಾರೋಂದಿಗೂ ಶತೃತ್ವ ಬೆಳೆಸಿಕೊಳ್ಳುವುದಿಲ್ಲ, ಉಳಿಸಿಕೊಂಡು ಹೋಗುವುದಿಲ್ಲ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ...

ನಾನು ರಾಜಕೀಯದಲ್ಲಿ ಯಾರೋಂದಿಗೂ ವೈರತ್ವ ಇಟ್ಟುಕೊಂಡಿಲ್ಲ: ನಿತಿನ್ ಗಡ್ಕರಿ
ನಿತಿನ್ ಗಡ್ಕರಿ
Published On :
ನಾಗ್ಪುರ: ರಾಜಕೀಯದಲ್ಲಿ ನಾನು ಯಾರೋಂದಿಗೂ  ಶತೃತ್ವ ಬೆಳೆಸಿಕೊಳ್ಳುವುದಿಲ್ಲ, ಉಳಿಸಿಕೊಂಡು ಹೋಗುವುದಿಲ್ಲ ಎಂದು ಕೇಂದ್ರ ಹೆದ್ದಾರಿ  ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 
ನಾಗ್ಪುರ ಲೋಕಸಭೆ ಕ್ಷೇತ್ರದಿಂದ  ಬಿಜೆಪಿ ಮಾಜಿ ಸಂಸದ ಎಂಪಿ ನಾನಾ ಪಾಟೋಲ್ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದು, ಅವರಿಗೆ ಶುಭಾಷಯ ತಿಳಿಸಿದ್ದಾರೆ. ಕಾಂಗ್ರೆಸ್ ನ ಅವರು ಅಭ್ಯರ್ಥಿಗಳ ಹೆಸರಲ್ಲಿ ಪಾಟೋಲ್  ಹೆಸರು ಸೇರಿದ್ದು, ಮಹಾರಾಷ್ಟ್ರ ಕಾಂಗ್ರೆಸ್ ಇಂದು ಪ್ರಕಟಿಸಲಿದೆ.
ತಮ್ಮ ತವರು ಕ್ಷೇತ್ರ ನಾಗ್ಪುರದಲ್ಲಿ ಪಾಟೋಲ್ ಸ್ಪರ್ಧಿಸುತ್ತಿರುವ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿತಿನ್ ಗಡ್ಕರಿ,  ಯಾವುದೇ ಅಭ್ಯರ್ಥಿ ಚುನಾವಣೆಗೆ ಎಲ್ಲಿ ಬೇಕಾದರೂ ಸ್ಪರ್ಧಿಸುವ ಹಕ್ಕಿದೆ,  ಯಾವುದೇ ಅಭ್ಯರ್ಥಿ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.ಕಳದ ಐದು ವರ್ಷಗಳಲ್ಲಿ ತಾವು ಮಾಡಿರುವ ಕೆಲಸಗಳನ್ನು ಹಿಡಿದು ಜನರ ಬಳಿ ಮತಯಾಚಿಸುವುದಾಗಿ ತಿಳಿಸಿದ್ದಾರೆ.
ಪಾಟೋಲ್ ಬಿಜೆಪಿಯಲ್ಲಿದ್ದಾಗ ಅವರ ಜೊತೆ ಉತ್ತಮ ಸಂಬಂಧ ಹೊಂದಿದ್ದೆ. ಒಮ್ಮ ಒಬ್ಬ ವ್ಯಕ್ತಿ ಪಕ್ಷ ತೊರೆದು ಹೋದರೇ ಅವರ ಜೊತೆ ಅವರ ಆಶೀರ್ನಾದವೂ  ಹೋಗಿಬಿಡುವುದಿಲ್ಲ,
ರಾಜಕೀಯದಲ್ಲಿ ನಾನು ಯಾರ ಜೊತೆಯೂ ವೈರತ್ವ ಕಟ್ಟಿಕೊಂಡಿಲ್ಲ, ಯಾವಾಗಲೂ ಅವರಿಗೆ ನನ್ನ ಬೆಸ್ಟ್ ವಿಷಸ್ ಇರುತ್ತದೆ ಎಂದು ಹೇಳಿದ್ದಾರೆ. ಫಕ್ಷದ ನಾಯಕರ ಜೊತೆಗಿನ ಭಿನ್ನಾಭಿಪ್ರಾಯದಿಂದ ಕಳೆದ ಕೆಲವು ವರ್ಷಗಳ ಹಿಂದೆ ಪಾಟೂಲ್ ಬಿಜೆಪಿ ತೊರೆದಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.