ಸಂಜೋತ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣಕ್ಕೆ ಮಹತ್ವದ ತಿರುವು: ಮಾ.14 ಕ್ಕೆ ವಿಚಾರಣೆ ಮುಂದೂಡಿಕೆ
ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣದ ತೀರ್ಪು ಪ್ರಕಟವಾಗಬೇಕಿದ್ದ ದಿನವೇ ಮಹತ್ವದ ತಿರುವು ದೊರೆತಿದ್ದು, ಹರ್ಯಾಣದ ಪಂಚಕುಲ ಕೋರ್ತ್ ವಿಚಾರಣೆಯನ್ನು ಮಾ.14 ಕ್ಕೆ ಮುಂದೂಡಿದೆ.

Published On :
ಹರ್ಯಾಣ: ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣದ ತೀರ್ಪು ಪ್ರಕಟವಾಗಬೇಕಿದ್ದ ದಿನವೇ ಮಹತ್ವದ ತಿರುವು ದೊರೆತಿದ್ದು, ಹರ್ಯಾಣದ ಪಂಚಕುಲ ಕೋರ್ತ್ ವಿಚಾರಣೆಯನ್ನು ಮಾ.14 ಕ್ಕೆ ಮುಂದೂಡಿದೆ.
ಪಾಕಿಸ್ತಾನದ ಮಹಿಳೆಯೊಬ್ಬರು ಈ ಪ್ರಕರಣದಲ್ಲಿ ಹೊಸ ಸಾಕ್ಷ್ಯ ಒದಗಿಸಲು ಮುಂದೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಮಾ.14 ರಂದು ಮಹಿಳೆ ನೀಡಲಿರುವ ಸಾಕ್ಷ್ಯಾಧಾರವನ್ನು ಪರಿಶೀಲಿಸಿ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ.
12 ವರ್ಷಗಳ ಹಿಂದೆ ಅಂದರೆ 2007 ರ ಫೆ.18 ರಂದು ಹರ್ಯಾಣದ ಪಾನಿಪತ್ ನಲ್ಲಿ ಸಂಜೋತಾ ಎಕ್ಸ್ ಪ್ರೆಸ್ ನಲ್ಲಿ ಬಾಂಬ್ ಸ್ಫೋಟಗೊಂಡು 68 ಜನರು ಸಾವನ್ನಪ್ಪಿದ್ದರು. ಬೇರೆ ಬೋಗಿಗಳಲ್ಲೂ ಎರಡು ಜೀವಂತ ಸೂಟ್ಕೇಸ್ ಬಾಂಬ್ಗಳು ಪತ್ತೆಯಾಗಿದ್ದವು. 2016 ರ ಡಿಸೆಂಬರ್ ನಲ್ಲಿ ಪ್ರಕರಣದ ಪ್ರಮುಖ ಆರೋಪಿ ಅಸೀಮಾನಂದ ಜಾಮೀನು ಪಡೆದಿದ್ದರು. ಇತರ ಕೆಲವು ಆರೋಪಿಗಳು ಬಂಧನದಲ್ಲೇ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ತೀರ್ಪುpetitionಅರ್ಜಿSamjhauta Express Blast CasePak Womanಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣಪಾಕಿಸ್ತಾನ ಮಹಿಳೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


