ದೇಶ

ಅಂಬಾನಿ ಪುತ್ರ ಆಕಾಶ್ -ಶ್ಲೋಕಾ ಮೆಹ್ತಾ ವೈಭವೋಪೇತ ವಿವಾಹ: ದೇಶ ವಿದೇಶಗಳ ಗಣ್ಯರ ದಂಡು

ಉದ್ಯಮಿ ರಿಲಯನ್ಸ್ ಕಂಪನಿ ಒಡೆಯ ಮುಕೇಶ್ ಅಂಬಾನಿ ಪುತ್ರ ಆಕಾಶ್ ಹಾಗೂ ವಜ್ರ ವ್ಯಾಪಾರಿ ರಸೆಲ್ ಮೆಹ್ತಾ ಪುತ್ರಿ ಶ್ಲೋಕಾ ಅವರ ವೈಭವೋಪೇತ ವಿವಾಹ ಮಹೋತ್ಸವ ನಡೆಯುತ್ತಿದ್ದು, ದೇಶ, ವಿದೇಶಗಳ ಗಣ್ಯರ ದಂಡೇ ವಿವಾಹಕ್ಕೆ ಆಗಮಿಸಿದೆ.

ಅಂಬಾನಿ ಪುತ್ರ ಆಕಾಶ್ -ಶ್ಲೋಕಾ ಮೆಹ್ತಾ ವೈಭವೋಪೇತ ವಿವಾಹ: ದೇಶ ವಿದೇಶಗಳ ಗಣ್ಯರ ದಂಡು
ಆಕಾಶ್ -ಶ್ಲೋಕಾ ಮದುವೆ ಸಮಾರಂಭ
Published On :
ಮುಂಬೈ: ರಿಲಯನ್ಸ್  ಇಂಡಸ್ಟ್ರೀಸ್ ಕಂಪನಿ ಮಾಲೀಕ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ , ವಜ್ರ ವ್ಯಾಪಾರಿ ರಸೆಲ್ ಮೆಹ್ತಾ ಪುತ್ರಿ ಶ್ಲೋಕಾ ಮೆಹ್ತಾ ಅವರ ವೈಭವೋಪೇತ ವಿವಾಹ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿದೆ.
ದೇಶದ ನಂಬರ್ 1 ಶ್ರೀಮಂತ ಮುಖೇಶ್ ಅಂಬಾನಿ ಅವರ ನೂತನ ಕಟ್ಟಡ ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿ ಮೂರು ದಿನಗಳ ಕಾಲ ಅದ್ದೂರಿ ವಿವಾಹ ಕಾರ್ಯಕ್ರಮ ನಡೆಯುತ್ತಿದ್ದು, ನಾಳೆ ಮಂಗಳ ಪರ್ವ, ನಾಡಿದ್ದು, ಅರತಕ್ಷತೆಯನ್ನು ಏರ್ಪಡಿಸಲಾಗಿದೆ.
ಆಕಾಶ್ ತಾಯಿ ನಿತಾ, ಬಾಲಿವುಡ್ ನಟರಾದ ಶಾರುಖ್ ಖಾನ್, ರಣಬೀರ್ ಕಪೂರ್, ಕಾಂಗ್ರೆಸ್  ರಾಜೀವ್ ಶುಕ್ಲಾ ಮತ್ತಿತರು ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ಕುಣಿದು ಕುಪ್ಪಳಿಸಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಗೂಗಲ್ ಮುಖ್ಯ  ಕಾರ್ಯನಿರ್ವಹಕಾಧಿಕಾರಿ ಸುಂದರ್ ಪಿಚ್ಚೈ,  ಹಿರಿಯ ಉದ್ಯಮಿ ರತನ್ ಟಾಟಾ , ಎನ್. ಚಂದ್ರಶೇಖರನ್,  ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಹಾಗೂ ಅವರ ಪತ್ನಿ ಚೇರಿ, ವಿಶ್ವ ಸಂಸ್ಥೆ ಮಾಜಿ ಕಾರ್ಯದರ್ಶಿ ಬಾನ್ ಕಿ ಬೂನ್  ಮತ್ತಿತರ ದೇಶ - ವಿದೇಶಗಳ ಗಣ್ಯರು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.