ಅಯೋಧ್ಯೆ ಭೂ ವಿವಾದಕ್ಕೆ ಸೌಹಾರ್ದಯುತ ಪರಿಹಾರ: ಸಂಧಾನ ಸಮಿತಿ ಮುಖ್ಯಸ್ಥ ಖಲೀಫುಲ್ಲಾ
ಯಾವುದೇ ಕೋಮಿನ ಭಾವನೆಗಳಿಗೂ ಧಕ್ಕೆಯಾಗದ ರೀತಿಯಲ್ಲಿ ಅಯೋಧ್ಯೆ ಭೂ ವಿವಾದ ಪ್ರಕರಣವನ್ನು ಸ್ನೇಹ-ಸೌಹಾರ್ಧಯುತವಾಗಿ ಪರಿಷ್ಕರಿಸುತ್ತೇವೆ ಎಂದು ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ಸಂಧಾನ ಸಮಿತಿ ಮುಖ್ಯಸ್ಥ ಖಲೀಫುಲ್ಲಾ ಹೇಳಿದ್ದಾರೆ.

Published On :
ನವದೆಹಲಿ: ಯಾವುದೇ ಕೋಮಿನ ಭಾವನೆಗಳಿಗೂ ಧಕ್ಕೆಯಾಗದ ರೀತಿಯಲ್ಲಿ ಅಯೋಧ್ಯೆ ಭೂ ವಿವಾದ ಪ್ರಕರಣವನ್ನು ಸ್ನೇಹ-ಸೌಹಾರ್ಧಯುತವಾಗಿ ಪರಿಷ್ಕರಿಸುತ್ತೇವೆ ಎಂದು ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ಸಂಧಾನ ಸಮಿತಿ ಮುಖ್ಯಸ್ಥ ಖಲೀಫುಲ್ಲಾ ಹೇಳಿದ್ದಾರೆ.
ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಸಂಧಾನ ಸಮಿತಿ ನೇಮಕ ಮಾಡಿ ಸಮಿತಿ ಮೂಲಕವೇ ವಿವಾದ ಇತ್ಯರ್ಥವಾಗಬೇಕು ಎಂಬ ಮಹತ್ವದ ತೀರ್ಪು ನೀಡಿದೆ. ಅತ್ತ ಸುಪ್ರೀಂ ಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆಯೇ ಇತ್ತ ಈ ಸಂಬಂಧ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಸಂಧಾನ ಸಮಿತಿ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ಅವರು, ಸುಪ್ರೀಂ ಕೋರ್ಟ್ ತಮ್ಮನ್ನು ಸಂಧಾನ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಆದರೆ ಈ ವರೆಗೂ ತಮಗೆ ಕೋರ್ಟ್ ಆದೇಶದ ಅಧಿಕೃತ ಪ್ರತಿ ಸಿಕ್ಕಿಲ್ಲ. ಶೀಘ್ರ ಪ್ರತಿ ಪಡೆಯಲು ಪ್ರಯತ್ನಿಸುತ್ತೇನೆ.
ಕೋರ್ಟ್ ಹಾಕಿರುವ ನಿಬಂಧನೆಗೊಳಪಟ್ಟು ಸ್ನೇಹ ಮತ್ತು ಸೌಹಾರ್ಧಯುತವಾಗಿ ವಿವಾದವನ್ನು ಇತ್ಯರ್ಥಗೊಳಿಸುತ್ತೇವೆ. ಸಂಧಾನ ಪ್ರಕ್ರಿಯೆಯಲ್ಲಿ ಅಗತ್ಯ ಬಿದ್ದರೆ ಸಾಂವಿಧಾನಿಕ ಪೀಠವನ್ನೇ ಸಲಹೆ ಕೇಳಿ ಪಡೆಯುತ್ತೇವೆ ಎಂದು ಖಲೀಫುಲ್ಲಾ ಹೇಳಿದ್ದಾರೆ.
ಇಂದು ಬೆಳಗ್ಗೆ ಪ್ರಕರಣ ಸಂಬಂಧ ತನ್ನ ಅಂತಿಮ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಸಂಧಾನದ ಮೂಲಕವೇ ಆಯೋಧ್ಯೆ ಭೂ ವಿವಾದ ಸಮಸ್ಯೆ ಇತ್ಯರ್ಥವಾಗಬೇಕು ಎಂದು ಹೇಳಿತ್ತು. ಅಲ್ಲದೆ ಈ ಸಂಧಾನ ಪ್ರಕ್ರಿಯೆಗಾಗಿ ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ, ಆರ್ಟ್ ಆಫ್ ಲಿವಿಂಗ್ ಸಂಸ್ಛೆಯ ಮುಖ್ಯಸ್ಥರಾದ ರವಿಶಂಕರ್ ಗುರೂಜಿ ಮತ್ತು ವಕೀಲ ಶ್ರೀರಾಮ್ ಪಂಚು ಅವರನ್ನು ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtನವದೆಹಲಿNew Delhiಸುಪ್ರೀಂ ಕೋರ್ಟ್Ayodhya land Dispute caseಅಯೋಧ್ಯೆ ಭೂ ವಿವಾದ ಪ್ರಕರಣIbrahim Kalifullahಇಬ್ರಾಹಿಂ ಖಲೀಫುಲ್ಲಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


