ಬಾಲಾಕೋಟ್ ಏರ್ ಸ್ಟ್ರೈಕ್ ವೇಳೆ ಜೈಷ್ ಕ್ಯಾಂಪ್‌ನಲ್ಲಿ 300 ಮೊಬೈಲ್ ಆ್ಯಕ್ಟಿವ್: ಎನ್‌ಟಿಆರ್‌ಒ ವರದಿ
ಬಾಲಾಕೋಟ್ ನ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಕ್ಯಾಂಪ್ ಮೇಲೆ ಭಾರತೀಯ ವಾಯುಸೇನೆ ಏರ್ ಸ್ಟ್ರೈಕ್ ವೇಳೆ 300 ಮೊಬೈಲ್ ಆ್ಯಕ್ಟಿವ್ ಆಗಿದ್ದು ದಾಳಿ ಬಳಿಕ ಅವುಗಳು ನಾಶವಾಗಿದ್ದಾವೆ...

Published On :
ನವದೆಹಲಿ: ಬಾಲಾಕೋಟ್ ನ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಕ್ಯಾಂಪ್ ಮೇಲೆ ಭಾರತೀಯ ವಾಯುಸೇನೆ ಏರ್ ಸ್ಟ್ರೈಕ್ ವೇಳೆ 300 ಮೊಬೈಲ್ ಆ್ಯಕ್ಟಿವ್ ಆಗಿದ್ದು ದಾಳಿ ಬಳಿಕ ಅವುಗಳು ನಾಶವಾಗಿದ್ದಾವೆ ಎಂದು ಎನ್‌ಟಿಆರ್‌ಒ ವರದಿ ದೃಢಪಡಿಸಿದೆ.
ಬಾಲಾಕೋಟ್ ಉಗ್ರರ ಕ್ಯಾಂಪ್ ಮೇಲಿನ ಏರ್ ಸ್ಟ್ರೈಕ್ ನಲ್ಲಿ ಎಷ್ಟು ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂಬ ಅಂಕಿ ಅಂಶಗಳ ಕುರಿತು ತೀವ್ರ ಚರ್ಚೆಗಳಾಗುತ್ತಿದ್ದು ಈ ಬಗ್ಗೆ ಇದೀಗ ವರದಿಯೊಂದು ಬಿತ್ತವಾಗಿದ್ದು ಏರ್ ಸ್ಟ್ರೈಕ್ ಗೂ ಮುನ್ನ 300ಕ್ಕೂ ಹೆಚ್ಚು ಮೊಬೈಲ್ ಗಳು ಆ್ಯಕ್ಟಿವ್ ಆಗಿದ್ದವು ಎಂದು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ(ಎನ್‌ಟಿಆರ್‌ಒ) ವರದಿ ದೃಢಪಡಿಸಿದೆ.
ದಾಳಿ ಬಳಿಕ ಈ ಮೊಬೈಲ್ ಗಳು ನಾಶವಾಗಿದ್ದವು. ಇದೇ ವಿಚಾರವಾಗಿ ಮಾಧ್ಯಮಗಳು ಸಹ ಸುಮಾರು 200 ರಿಂದ 300 ಭಯೋತ್ಪಾದಕರು ಮೃತಪಟ್ಟಿರಬಹುದು ಎಂದು ವರದಿ ಮಾಡಿದ್ದವು. ಇದೀಗ ಗುಪ್ತಚರ ಇಲಾಖೆ ಹಾಗೂ ತಾಂತ್ರಿಕ ಸಂಶೋಧನೆಗಳು ಇಷ್ಟೇ ಅಂಕಿ-ಅಂಶಗಳನ್ನು ನೀಡುತ್ತಿವೆ.
ಈ ಮಧ್ಯೆ ಏರ್ ಸ್ಟ್ರೈಕ್ ಕುರಿತಂತೆ ಮಾತನಾಡಿದ್ದ ಭಾರತೀಯ ವಾಯುಪಡೆ ಮುಖ್ಯಸ್ಥ ಬಿಎಸ್ ಧನೋವಾ ಸಹ ನಮ್ಮ ಪಡೆಗಳು ನಿಗದಿತ ಹಾಗೂ ನಿರ್ದಿಷ್ಟ ಸ್ಥಳದಲ್ಲೇ ದಾಳಿ ಮಾಡಿ ಯಶಸ್ವಿಯಾಗಿ ವಾಪಸ್ ಬಂದಿದ್ದವು, ನಾವು ಅಂದುಕೊಂಡಿದ್ದನ್ನು ಸಾಧಿಸಿದ್ದೇವೆ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistanಪಾಕಿಸ್ತಾನBalakotಬಾಲಾಕೋಟ್IAF Air strikeಐಎಎಫ್ ಏರ್ ಸ್ಟ್ರೈಕ್NTRO SurveillanceJeM Campಎನ್ಟಿಆರ್ಒಜೈಷ್ ಕ್ಯಾಂಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


