ದೇಶ

ಕಾಶ್ಮೀರ ವಿಚಾರ ಸಂಪೂರ್ಣ ಆಂತರಿಕ, ಇತರರ ಮಧ್ಯಸ್ಥಿಕೆ ಬೇಡ; ಸುಷ್ಮಾ ಸ್ವರಾಜ್

ಸೌದಿಯಲ್ಲಿ ನಡೆಯುತ್ತಿರುವ ಇಸ್ಲಾಮಿಕ್‌ ಸಹಕಾರ ಸಂಘಟನೆ (ಒಐಸಿ) ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಅವಿರೋಧ ನಿರ್ಣಯ ಕೈಗೊಂಡ ಬೆನ್ನಲ್ಲೇ ತಿರುಗೇಟು ನೀಡಿರುವ ಭಾರತ ಕಾಶ್ಮೀರ ವಿಚಾರ ಸಂಪೂರ್ಣ ಆಂತರಿಕವಿಚಾರವಾಗಿದ್ದು, ಇತರರ ಮಧ್ಯಸ್ಥಿಕೆ ಬೇಡ ಎಂದು ಹೇಳಿದೆ.

ಕಾಶ್ಮೀರ ವಿಚಾರ ಸಂಪೂರ್ಣ ಆಂತರಿಕ, ಇತರರ ಮಧ್ಯಸ್ಥಿಕೆ ಬೇಡ; ಸುಷ್ಮಾ ಸ್ವರಾಜ್
ಸಂಗ್ರಹ ಚಿತ್ರ
Published On :
ಅಬುದಾಬಿ: ಸೌದಿಯಲ್ಲಿ ನಡೆಯುತ್ತಿರುವ ಇಸ್ಲಾಮಿಕ್‌ ಸಹಕಾರ ಸಂಘಟನೆ (ಒಐಸಿ) ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಅವಿರೋಧ ನಿರ್ಣಯ ಕೈಗೊಂಡ ಬೆನ್ನಲ್ಲೇ ತಿರುಗೇಟು ನೀಡಿರುವ ಭಾರತ ಕಾಶ್ಮೀರ ವಿಚಾರ ಸಂಪೂರ್ಣ ಆಂತರಿಕವಿಚಾರವಾಗಿದ್ದು, ಇತರರ ಮಧ್ಯಸ್ಥಿಕೆ ಬೇಡ ಎಂದು ಹೇಳಿದೆ.
ಕಾಶ್ಮೀರದಲ್ಲಿನ ಆಂತರಿಕ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಒಐಸಿಯಲ್ಲಿ ಕಾಶ್ಮೀರದಲ್ಲಿನ ಅಕ್ರಮ ಬಂಧನಗಳು ಮತ್ತು ಕಣ್ಮರೆ ವಿರೋಧಿಸಿ ನಿನ್ನೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇದನ್ನು ವಿರೋಧಿಸಿರುವ ಭಾರತ ಕಾಶ್ಮೀರ ಸಂಪೂರ್ಣ ಆಂತರಿಕ ವಿಚಾರವಾಗಿದ್ದು, ಇದರಲ್ಲಿ ಇತರರ ಮಧ್ಯಸ್ಥಿಕೆ ಬೇಡ ಎಂದು ತಿರುಗೇಟು ನೀಡಿದೆ.
ಅಂತೆಯೇ ಕಾಶ್ಮೀರ ಎಂದಿಗೂ ಭಾರತದ ಅವಿಭಾಜ್ಯ ಅಂಗವಾಗಿರಲಿದ್ದು, ಕಾಶ್ಮೀರ ವಿಚಾರದಲ್ಲಿ ನಮ್ಮ ನಿಲುವು ಸಡಿಲಗೊಳಿಸುವುದು ಸಾಧ್ಯವಿಲ್ಲ. ಅಂತೆಯೇ ಇದರಲ್ಲಿ ಇತರೆ ರಾಷ್ಟ್ರಗಳ ಮಧ್ಯಪ್ರವೇಶವನ್ನೂ ಭಾರತ ವಿರೋಧಿಸುತ್ತದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟವಾಗಿ ಹೇಳಿದ್ದಾರೆ.
ಅಂತೆಯೇ ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ಛಾಟಿ ಬೀಸಿರುವ ಸುಷ್ಮಾ, ಕಾಶ್ಮೀರ ರಾಜ್ಯದ ರಕ್ಷಣೆಯಾಗಬೇಕು ಎಂದರೆ ಭಯೋತ್ಪಾದನೆಗೆ ಪ್ರಾಯೋಜಕತ್ವ ವಹಿಸುತ್ತಿರುವ ರಾಷ್ಟ್ರಗಳನ್ನು ಇದರಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಅಂತೆಯೇ ಉಗ್ರರಿಗೆ ಆ ರಾಷ್ಟ್ರಗಳು ನೀಡುತ್ತಿರುವ ನೆರವು ತಡೆ ಹಿಡಿಯಬೇಕು ಎಂದು ಅಗ್ರಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.