ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿಗೆ ಅಪರಿಚಿತರಿಂದ ಜೀವ ಬೆದರಿಕೆ
ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿಗೆ ಆಪರಿಚಿತ ದುಷ್ಕರ್ಮಿಯೊಬ್ಬ ಜೀವ ಬೆದರಿಕೆ ಒಡ್ಡಿದ್ದಾನೆ.

Published On :
ನವದೆಹಲಿ: ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿಗೆ ಆಪರಿಚಿತ ದುಷ್ಕರ್ಮಿಯೊಬ್ಬ ಜೀವ ಬೆದರಿಕೆ ಒಡ್ಡಿದ್ದಾನೆ. ತಿವಾರಿಯವರ ಖಾಸಗಿ ಮೊಬೈಲ್ ಸಂಖ್ಯೆಗೆ ಬಂದ ಸಂದೇಶ (ಎಸ್.ಎಂ.ಎಸ್.) ಒಂದರಲ್ಲಿ "ನಿಮ್ಮನ್ನು ಮುಗಿಸಲು ನನ್ನ ಮೇಲೆ ತೀವ್ರ ಒತ್ತಡವಿದೆ" ಎಂದು ಬರೆಯಲಾಗಿದೆ.
ಇದೇ ವೇಳೆ ಪ್ರಧಾನ ಮಂತ್ರಿಯವರನ್ನೂ ಸಹ "ಅಗತ್ಯಬಿದ್ದಲ್ಲಿ ಹತ್ಯೆಮಾಡಲಾಗುತ್ತದೆ" ಎಂದು ದುಷ್ಕರ್ಮಿ ಎಸ್‌ಎಂಎಸ್ ಮೂಲಕ ತಿಳಿಸಿದ್ದಾಗಿ ತಿವಾರಿ ಹೇಳಿದ್ದಾರೆ.
"ಬೆದರಿಕೆ ಬಗ್ಗೆ ನಾನು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ" ಎಂದು ತಿವಾರಿ ಪಿಟಿಐಗೆ ತಿಳಿಸಿದ್ದಾರೆ.
ದುಷ್ಕರ್ಮಿಯು ತಿವಾರಿಯವರಿಗೆ ಹಿಂದಿಯಲ್ಲಿ ಸಂದೇಶ ಕಳಿಸಿದ್ದು "ತೀವ್ರ ಒತ್ತಡದ ಕಾರಣಕ್ಕಾಗಿ ನಾನು ನಿಮ್ಮನ್ನು ಹತ್ಯೆಗೈಯಲು ಮುಂದಾಗಿದ್ದಕ್ಕೆ ಕ್ಷಮೆ ಇರಲಿ" ಎಂದು ಕೇಳಿಕೊಂಡಿದ್ದಾನೆ.
ಬೆದರಿಕೆ ಬಗ್ಗೆ ಅಧಿಕೃತ ದೂರು ಶೀಘ್ರದಲ್ಲೇ ಸಲ್ಲಿಕೆಯಾಗಲಿದೆ ಎಂದು ದೆಹಲಿ ಬಿಜೆಪಿಯ ಮಾಧ್ಯಮ ವಕ್ತಾರರಾದ ನೀಲಕಂತ್ ಬಕ್ಷಿ ಹೇಳಿದ್ದಾರೆ ತಿವಾರಿಯವರ ಮೊಬೈಲ್ ಗೆ ಶುಕ್ರವಾರ ಮಧ್ಯಾಹ್ನ 12.52 ಕ್ಕೆ ಎಸ್‌ಎಂಎಸ್ ಬಂದಿದ್ದು, ಶನಿವಾರ ಸಂಜೆ ನೋಡಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


