ರಾಹುಲ್ ಗಾಂಧಿ ಯೋಗ ಮಾಡದಿದ್ದಕ್ಕೆ ಚುನಾವಣೆಲಿ ಕಾಂಗ್ರೆಸ್ ಸೋತಿದೆ: ಯೋಗಗುರು ರಾಮ್‍ದೇವ್
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯೋಗ ಮಾಡದ ಕಾರಣ ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷ ಸೋಲು ಕಂಡಿದೆ ಎಂದು ಯೋಗಗುರು, ಪತಂಜಲಿ ಸಂಸ್ಥೆಯ ಆದ್ವರ್ಯ ಬಾಬಾ ರಾಮ್‍ದೇವ್ ಹೇಳೀದ್ದಾರೆ.

Published On :
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯೋಗ ಮಾಡದ ಕಾರಣ ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷ ಸೋಲು ಕಂಡಿದೆ ಎಂದು ಯೋಗಗುರು, ಪತಂಜಲಿ ಸಂಸ್ಥೆಯ ಆದ್ವರ್ಯ ಬಾಬಾ ರಾಮ್‍ದೇವ್ ಹೇಳೀದ್ದಾರೆ.
ಜೂನ್ 21 ಅಂತರಾಷ್ಟ್ರೀಯ ಯೋಗ ದಿನವಾಗಿದ್ದು ಈ ಸಂಬಂಧ ತಯಾರಿ ನಡೆಸಿರುವ ರಾಮ್‍ದೇವ್ ಯೋಗ ಮಾಡುವವರಿಗಷ್ಟೇ ಅಚ್ಚೇ ದಿನ್ ಬರುತ್ತದೆ ಎಂದು ಹೇಳಿದ್ದಾರೆ.
ಯೋಗವನ್ನು ವಿಶ್ವವ್ಯಾಪಿ ಜನಪ್ರಿಯಗೊಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ ರಾಮ್‍ದೇವ್ ರಾಹುಲ್ ಗಾಂಧಿ ಯೋಗ ಮಾಡದ ಕಾರಣ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿದೆ ಎಂದು ಟೀಕಿಸಿದ್ದಾರೆ.
"ಮೋದಿ ಸಾರ್ವಜನಿಕವಾಗಿ ಯೋಗ ಮಾಡುತ್ತಾರೆ. ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ, ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಗುಪ್ತವಾಗಿ ಯೋಗಾಭ್ಯಾಸ ಮಾಡುತ್ತಿದ್ದರು. ಆದರೆ ಅವರ ವಂಶದ ಕುಡಿಯಾಗಿರುವ ರಾಹುಲ್ ಗಾಂಧಿ ಯೋಗ ಮಾಡುವುದಿಲ್ಲ.ಹಾಗಾಗಿ ಅವರ ರಾಜಕೀಯ ಜೀವನ ಇಳಿಮುಖದತ್ತ ಸಾಗಿದೆ. ಯೋಗ ಮಾಡುವವರಿಗೆ ಅಚ್ಚೇ ದಿನ್ ಬರುತ್ತದೆ" ರಾಮ್‍ದೇವ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


