ಆದಿತ್ಯನಾಥ್ ವಿರುದ್ಧ ಮಾನಹಾನಿ ಸುದ್ದಿ ಪ್ರಸಾರ: ನೋಯ್ಡಾ ಮೂಲದ ಟಿವಿ ಪತ್ರಕರ್ತರಿಗೆ ಜಾಮೀನು
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಮಾನಹಾನಿಕಾರಕ ಸುದ್ದಿ ಪ್ರಸಾರ ಮಾಡಿದ್ದ ಆರೋಪದ ಮೇಲೆ ಬಂಧಿಸಲ್ಪಟ್ಟ ನೋಯ್ಡಾ ಮೂಲದ ಟಿವಿ ಸುದ್ದಿ ವಾಹಿನಿಯ....

Published On :
ನೋಯ್ಡಾ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಮಾನಹಾನಿಕಾರಕ ಸುದ್ದಿ ಪ್ರಸಾರ ಮಾಡಿದ್ದ ಆರೋಪದ ಮೇಲೆ ಬಂಧಿಸಲ್ಪಟ್ಟ ನೋಯ್ಡಾ ಮೂಲದ ಟಿವಿ ಸುದ್ದಿ ವಾಹಿನಿಯ ಮೂವರು ಪತ್ರಕರ್ತರಿಗೆ ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿದೆ.
ಮಾನನಷ್ಟ ಪ್ರಕರಣದಲ್ಲಿ ಬಂಧಿಗಳಾಗಿದ್ದ ಮೂವರು ಟಿವಿ ಪತ್ರಕರ್ತರಿಗೆ ನ್ಯಾಯಾಲಯ ಜಾಮೀನು ನೀಡಿದ್ದಾಗಿ ಅವರ ಪರ ವಕೀಲರು ಹೇಳಿದ್ದಾರೆ.
ಆದರೆ, ನೇಷನ್ ಲೈವ್ ಲೇಖಕರಾದ ಇಶಿಕಾ ಸಿಂಗ್, ಅನುಜ್ ಶುಕ್ಲಾ ಮತ್ತು ಅನ್ಶುಲ್ ಕೌಶಿಕ್ ವಿರಿದ್ಧ ಇನ್ನೂ ಬಾಕಿ ಉಳಿದಿರುವ ವಂಚನೆ ಮತ್ತು ಖೋಟಾ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಗಿಲ್ಲ ಎಂದು ವಕೀಲರು ತಿಳಿಸಿದ್ದಾರೆ.
ಸಿಂಗ್ ಮತ್ತು ಶುಕ್ಲಾ ಅವರನ್ನು ಜೂನ್ 8 ರಂದು ಬಂಧಿಸಲಾಗಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಚಾನೆಲ್ ಆದಿತ್ಯನಾಥ್ ಬಗೆಗೆ ವಿವಾದಾತ್ಮಕ ವಿಷಯವನ್ನು ಪ್ರಸಾರ ಮಾಡಿದ ಎರಡು ದಿನಗಳ ನಂತರ. ಅವರ ಬಂಧನವಾಗಿತ್ತು. ಇದೇ ಪ್ರಕರಣದಲ್ಲಿ ಜೂನ್ 10 ರ ರಾತ್ರಿ ಕೌಶಿಕ್ ಅವರನ್ನು ಬಂಧಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Yogi Adityanathಯೋಗಿ ಆದಿತ್ಯನಾಥ್Nation LiveIshika SinghAnuj ShuklaAnshul Kaushikನೇಷನ್ ಲೈವ್ಇಶಿಕಾ ಸಿಂಗ್ಅನುಜ್ ಶುಕ್ಲಾಅನ್ಶುಲ್ ಕೌಶಿಕ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


