ದೇಶ

ವಿಜಯವಾಡ: 70 ವರ್ಷದ ವೃದ್ಧೆಯ ಮೇಲೆ ಗ್ಯಾಂಗ್ ರೇಪ್, ಬ್ಲೇಡ್ ನಿಂದ ಹಲ್ಲೆ

ಅಪರಿಚಿತ ದುಷ್ಕರ್ಮಿಗಳು 70 ವರ್ಷದ ವೃದ್ಧೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಬ್ಲೇಡ್ ನಿಂದ ಹಲ್ಲೆ ನಡೆಸಿರುವ ಅಮಾನವೀಯ ಘಟನೆ....

ವಿಜಯವಾಡ: 70 ವರ್ಷದ ವೃದ್ಧೆಯ ಮೇಲೆ ಗ್ಯಾಂಗ್ ರೇಪ್, ಬ್ಲೇಡ್ ನಿಂದ ಹಲ್ಲೆ
ಸಾಂದರ್ಭಿಕ ಚಿತ್ರ
Published On :
ವಿಜಯವಾಡ: ಅಪರಿಚಿತ ದುಷ್ಕರ್ಮಿಗಳು 70 ವರ್ಷದ ವೃದ್ಧೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಬ್ಲೇಡ್ ನಿಂದ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಮಂಗಳವಾರ ರಾತ್ರಿ ಅಂಧ್ರ ಪ್ರದೇಶದ ವಿಜಯವಾಡ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಇದು ಕುಖ್ಯಾತ ಬ್ಲೇಡ್ ಬ್ಯಾಚ್ ಗ್ಯಾಂಗ್ ನ ಕೃತ್ಯ ಅಥವಾ ಗಾಂಜಾ ನಶೆಯಲ್ಲಿ ದುಷ್ಕರ್ಮಿಗಳು ಎಸಗಿರುವ ಕೃತ್ಯವಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ರಸ್ತೆ ಅಪಘಾತದಲ್ಲಿ ಪತಿ ನಿಧನವಾದ ನಂತರ ವಿಜಯವಾಡದಲ್ಲಿ ವಾಸಿಸುತ್ತಿದ್ದ ಈ ವೃದ್ಧೆ ರೈಲ್ವೆ ನಿಲ್ದಾಣದ ಸಮೀಪಿ ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. 
ನಿನ್ನೆ ತಡರಾತ್ರಿ ನೈರ್ಮಲ್ಯ ಕಾರ್ಮಿಕರು ಪ್ಲಾಟ್ ಫಾರ್ಮ್ ಸ್ವಚ್ಛಗೊಳಿಸುತ್ತಿದ್ದ ವೇಳೆ, ಪ್ಲಾಟ್ ಫಾರ್ಮ್ 8ರ ಬಳಿ ವೃದ್ಧೆ ರಕ್ತದ ಮಡುವಿನಲ್ಲಿ ಬೆತ್ತಲೆಯಾಗಿ ಬಿದ್ದಿರುವುದನ್ನು ಗಮನಿಸಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ವೃದ್ಧೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಕುತ್ತಿಗೆ, ಎದೆ ಹಾಗೂ ಖಾಸಗಿ ಭಾಗದಲ್ಲಿ ಗಾಯಗಳಾಗಿದ್ದು, ಘಟನೆಯಿಂದ ಮಹಿಳೆಗೆ ಆಘಾತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.