ವಡೋದರ: ಹೊಟೆಲ್ ಒಳಚರಂಡಿ ಸ್ವಚ್ಛತೆ ವೇಳೆ ಉಸಿರುಗಟ್ಟಿ 7 ಮಂದಿ ಸಾವು!
ಗುಜರಾತ್ ನ ವಡೋದರಾದಲ್ಲಿ ಭೀಕರ ಒಳಚರಂಡಿ ದುರಂತ ಸಂಭವಿಸಿದ್ದು, ಸ್ವಚ್ಛತೆ ವೇಳೆ ಉಸಿರುಗಟ್ಟಿ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Published On :
ವಡೋದರ: ಗುಜರಾತ್ ನ ವಡೋದರಾದಲ್ಲಿ ಭೀಕರ ಒಳಚರಂಡಿ ದುರಂತ ಸಂಭವಿಸಿದ್ದು, ಸ್ವಚ್ಛತೆ ವೇಳೆ ಉಸಿರುಗಟ್ಟಿ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ವಡೋದರಾದ ದಭೋಯ್ ತೆಹ್ಸಿಲ್ ನ ಫರ್ತಿಕುಯ್ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಕಳೆದ 3 ದಿನಗಳಿಂದ ಇಲ್ಲಿನ ಹೊಟೆಲ್ ನ ಒಳಚರಂಡಿ ಕಟ್ಟಿಕೊಂಡಿತ್ತು. ಇದರ ಸ್ವಚ್ಛತೆಗಾಗಿ ನಾಲ್ಕು ಮಂದಿ ಕಾರ್ಮಿಕರು ಆಗಮಿಸಿದ್ದರು. ಒಳಚರಂಡಿ ಒಳಗೆ ಇಳಿದಿದ್ದ ನಾಲ್ಕು ಮಂದಿ ಕಾರ್ಮಿಕರು ಸುಮಾರು ಗಂಟೆಗಳೇ ಕಳೆದರೂ ಹೊರಗೆ ಬರಲಿಲ್ಲ. ಅನುಮಾನಗೊಂಡ ಹೊಟೆಲ್ ನ ಮೂವರು ಸಿಬ್ಬಂದಿಗಳು ಒಳಚರಂಡಿ ಒಳಗೆ ಇಳಿದಿದ್ದು, ಆಗ ಅವರೂ ಕೂಡ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಪ್ರಸ್ತುತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಈ ದುರಂತದ ಬಗ್ಗೆ ಜಿಲ್ಲಾಧಿಕಾರಿ ಕಿರಣ್ ಜವೇರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸ್ವಚ್ಛತೆಗಾಗಿ ಚರಂಡಿಯೊಳಗೆ ಇಳಿದಿದ್ದ ಕಾರ್ಮಿಕರು ಕುಸಿದಿದ್ದು, ಈ ವೇಳೆ ಅವರನ್ನು ರಕ್ಷಿಸಲು ಹೊಟೆಲ್ ಕಾರ್ಮಿಕರು ಕೂಡ ಚರಂಡಿಯೊಳಗೆ ಇಳಿದಿದ್ದಾರೆ. ಆಗ ಅವರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


