ದೇಶ

ಪರದೇಶಿ ವಿವಾದ: ತಮ್ಮ ಹುಟ್ಟಿನ ಸಾಕ್ಷ್ಯ ಹೇಳಿದ್ದ ನರ್ಸ್ ರಾಜಮ್ಮಗೆ ರಾಹುಲ್ ಗಾಂಧಿ ಪ್ರೀತಿಯ ಅಪ್ಪುಗೆ!

ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪೌರತ್ವ ವಿವಾದ ಭುಗಿಲೆದ್ದಿತ್ತು. ಈ ಸಂದರ್ಭದಲ್ಲಿ ಕೇರಳದ ನಿವೃತ್ತ ನರ್ಸ್ ರಾಜಮ್ಮ...

ಪರದೇಶಿ ವಿವಾದ: ತಮ್ಮ ಹುಟ್ಟಿನ ಸಾಕ್ಷ್ಯ ಹೇಳಿದ್ದ ನರ್ಸ್ ರಾಜಮ್ಮಗೆ ರಾಹುಲ್ ಗಾಂಧಿ ಪ್ರೀತಿಯ ಅಪ್ಪುಗೆ!
ರಾಹುಲ್ ಗಾಂಧಿ-ರಾಜಮ್ಮ
Published On :
ವಯನಾಡು: ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪೌರತ್ವ ವಿವಾದ ಭುಗಿಲೆದ್ದಿತ್ತು. ಈ ಸಂದರ್ಭದಲ್ಲಿ ಕೇರಳದ ನಿವೃತ್ತ ನರ್ಸ್ ರಾಜಮ್ಮ, ರಾಹುಲ್ ಹುಟ್ಟಿದ ಸಂದರ್ಭ ನವಜಾತ ಶಿಶುವನ್ನು ಮೊದಲ ಕೈಗಳಲ್ಲಿ ಎತ್ತಿಕೊಂಡಿದ್ದ ಖುಷಿಯನ್ನು ಹಂಚಿಕೊಂಡಿದ್ದರು. 
ನಿವೃತ್ತ ನರ್ಸ್ ರಾಜಮ್ಮ ಅವರು ಸದ್ಯ ವಯನಾಡುವಿನಲ್ಲಿ ವಾಸವಾಗಿದ್ದಾರೆ. ಇನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡಿನಿಂದ ಸ್ಪರ್ಧಿಸಿ ಗೆದ್ದು ಬಂದಿರುವ ರಾಹುಲ್ ಗಾಂಧಿ ವಯನಾಡಿಗೆ ಭೇಟಿ ನೀಡಿದಾಗ ರಾಜಮ್ಮ ಅವರನ್ನು ಭೇಟಿ ಮಾಡಿ ಎದೆಗೆ ಅಪ್ಪಿಕೊಂಡಿದ್ದು ಈ ಸಂದರ್ಭದಲ್ಲಿ ರಾಜಮ್ಮ ಅವರು ಭಾವೋದ್ವೇಗಕ್ಕೊಳಗಾದರು. 
1970ರ ಜೂನ್ 19ರಂದು ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ರಾಹುಲ್ ಗಾಂಧಿ ಹುಟ್ಟಿದಾಗ ಅಲ್ಲಿ ತರಬೇತಿ ನಿರತ ನರ್ಸ್ ಆಗಿದ್ದ ರಾಜಮ್ಮ ಅವರು ರಾಹುಲ್ ಗಾಂಧಿಯನ್ನು ಮೊದಲ ಬಾರಿಗೆ ಎತ್ತಿಕೊಂಡಿದ್ದರು. ಇನ್ನು ರಾಹುಲ್ ಅವರ ಪೌರತ್ವವನ್ನು ಯಾರು ಪ್ರಶ್ನಿಸಬಾರದು ಎಂದು ರಾಜಮ್ಮ ಈ ಹಿಂದೆ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.