ದೇಶ

ನಾಪತ್ತೆಯಾಗಿರುವ ಎಎನ್ -32 ವಿಮಾನದ ಬಗ್ಗೆ ಮಾಹಿತಿ ನೀಡುವವರಿಗೆ 5 ಲಕ್ಷ ನಗದು ಬಹುಮಾನ ಘೋಷಣೆ

ಕಳೆದ ಆರು ದಿನಗಳಿಂದ ನಾಪತ್ತೆಯಾಗಿರುವ ಭಾರತೀಯ ವಾಯುಪಡೆಯ ಎಎನ್ -32 ವಿಮಾನ ಬಗ್ಗೆ ಮಾಹಿತಿ ನೀಡುವವರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಭಾರತೀಯ ವಾಯುಪಡೆ ಘೋಷಿಸಿದೆ.

ನಾಪತ್ತೆಯಾಗಿರುವ ಎಎನ್ -32 ವಿಮಾನದ ಬಗ್ಗೆ ಮಾಹಿತಿ ನೀಡುವವರಿಗೆ  5 ಲಕ್ಷ ನಗದು ಬಹುಮಾನ ಘೋಷಣೆ
ಸಾಂದರ್ಭಿಕ ಚಿತ್ರ
Published On :
ನವ ದೆಹಲಿ: ಕಳೆದ ಆರು ದಿನಗಳಿಂದ ನಾಪತ್ತೆಯಾಗಿರುವ ಭಾರತೀಯ ವಾಯುಪಡೆಯ ಎಎನ್ -32 ವಿಮಾನ ಬಗ್ಗೆ ಮಾಹಿತಿ ನೀಡುವವರಿಗೆ 5 ಲಕ್ಷ ರೂಪಾಯಿ  ನಗದು ಬಹುಮಾನ ನೀಡುವುದಾಗಿ ಭಾರತೀಯ ವಾಯುಪಡೆ ಘೋಷಿಸಿದೆ.
ನಾಪತ್ತೆಯಾಗಿರುವ ವಿಮಾನದ ಶೋಧನಾ ಕಾರ್ಯ ಮುಂದುವರೆದಿದ್ದು, ವಿಮಾನದ ಬಗ್ಗೆ ಸುಳಿವು ನೀಡುವವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ  ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಈಸ್ಟರ್ನ್ ಏರ್ ಕಮಾಂಡ್ ಏರ್ ಮಾರ್ಷಲ್ ಆರ್ ಡಿ ಮಾಥುರ್  ಘೋಷಿಸಿದ್ದಾರೆ.
ನಾಪತ್ತೆಯಾಗಿರುವ ವಿಮಾನದ ಬಗ್ಗೆ ಮಾಹಿತಿ ನೀಡುವ ವ್ಯಕ್ತಿ ಅಥವಾ ಗುಂಪುಗಳಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಆರ್ ಡಿ ಮಾಥುರ್ ಘೋಷಿಸಿದ್ದಾರೆ ಎಂದು ಶಿಲ್ಲಾಂಗ್ ಮೂಲದ ಭಾರತೀಯ ವಾಯುಪಡೆ ವಕ್ತಾರರು ಹೇಳಿದ್ದಾರೆ.
ವಿಮಾನದ ಬಗ್ಗೆ ಮಾಹಿತಿ ನೀಡಲು ಮೊಬೈಲ್ ನಂಬರ್  - 9436499477, 9402077267, 9402132477  ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೋಮವಾರ ಅಸ್ಸಾಂನ ಜರ್ಹಾತ್  ವಾಯುನೆಲೆಯಿಂದ ಅರುಣಾಚಲ ಪ್ರದೇಶದ ಚೀನಾ ಗಡಿ ಪ್ರದೇಶ ಮೆಚುಕಾ ಕಡೆಗೆ ತೆರಳುತ್ತಿದ್ದ 13 ಮಂದಿ ಪ್ರಯಾಣಿಸುತ್ತಿದ್ದ ಎಎನ್ -32 ವಿಮಾನ ನಾಪತ್ತೆಯಾಗಿದ್ದು, ಈವರೆಗೂ ಸಣ್ಣ ಸುಳಿವು ಸಿಕ್ಕಿಲ್ಲ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.