ಪಂಜಾಬ್: ಮುಖ್ಯಮಂತ್ರಿ ಜೊತೆಗೆ ಮುಸುಕಿನ ಗುದ್ದಾಟ, ಸಿಧು ಕೈ ತಪ್ಪಿದ ಪ್ರಮುಖ ಖಾತೆ
ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಜೊತೆಗಿನ ಮುಸುಕಿನ ಗುದ್ದಾಟದಿಂದಾಗಿ ನವಜೋತ್ ಸಿಂಗ್ ಸಿಧು ಅವರ ಬಳಿಯಿದ್ದ ಸ್ಥಳೀಯ ಸರ್ಕಾರದ ಇಲಾಖೆ ಖಾತೆಯನ್ನು ಕಿತ್ತುಕೊಂಡು ಇಂಧನ ಖಾತೆಯನ್ನು ನೀಡಲಾಗಿದೆ.

Published On :
ಚಂಡೀಗಡ: ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಜೊತೆಗಿನ ಮುಸುಕಿನ ಗುದ್ದಾಟದಿಂದಾಗಿ ನವಜೋತ್ ಸಿಂಗ್ ಸಿಧು ಅವರ ಬಳಿಯಿದ್ದ ಸ್ಥಳೀಯ ಸರ್ಕಾರದ ಇಲಾಖೆ ಖಾತೆಯನ್ನು ಕಿತ್ತುಕೊಂಡು ಇಂಧನ ಖಾತೆಯನ್ನು ನೀಡಲಾಗಿದೆ.
ಲೋಕಸಭಾ ಚುನಾವಣೆ ಮುಗಿದ ನಂತರ ನಡೆದ ಮೊದಲ ರಾಜ್ಯ ಸಂಪುಟ ಸಭೆ ಆದ ಕೆಲ ತಾಸುಗಳಲ್ಲಿಯೇ ಸಂಪುಟ ಪುನರ್ ರಚನೆ ಮಾಡಲಾಗಿದ್ದು, ಅಮರೀಂದರ್ ಸಿಂಗ್ ಬಹುತೇಕ ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ.
ಸಿಧು ಅವರಿಂದ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ವ್ಯವಹಾರಗಳ ಖಾತೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ನಾಲ್ವರು ಮಂತ್ರಿಗಳನ್ನು ಹೊರತುಪಡಿಸಿ, ಇನ್ನಿತರ ಹಲವು ಖಾತೆಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಹೊಸ ಜವಾಬ್ದಾರಿ ವಹಿಸಲಾಗಿದೆ.
ಸಂಟುಪ ಪುನರ್ ರಚನೆಯಿಂದಾಗಿ ಆಡಳಿತದಲ್ಲಿ ಪ್ರಾಮಾಣಿಕತೆ ಹಾಗೂ ದಕ್ಷತೆ ಹೆಚ್ಚಲು ಹಾಗೂ ಸರ್ಕಾರ ಸುಗಮವಾಗಿ ಸಾಗಲು ನೆರವಾಗಲಿದೆ ಎಂದು ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


