ನಿತೀಶ್ ಕುಮಾರ್ ಅವರ ಜೆಡಿ(ಯು) ಪಕ್ಷ ಸೇರಬೇಕಾದರೆ ಈ ಒಂದು ಸಣ್ಣ ಕೆಲಸ ಮಾಡಲೇಬೇಕು!
ಜನತಾ ದಳ(ಸಂಯುಕ್ತ) ಪಕ್ಷವನ್ನು ಯಾರಾದರೂ ಸೇರಲು ಬಯಸುತ್ತಿದ್ದರೆ ನೀವೊಂದು ಸಣ್ಣ ಕೆಲಸ ...

Published On :
ಪಾಟ್ನಾ: ಜನತಾ ದಳ(ಸಂಯುಕ್ತ) ಪಕ್ಷವನ್ನು ಯಾರಾದರೂ ಸೇರಲು ಬಯಸುತ್ತಿದ್ದರೆ ನೀವೊಂದು ಸಣ್ಣ ಕೆಲಸ ಮಾಡಬೇಕು. ನಿನ್ನೆ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು, ಈ ದಿನ ಜನರು ಗಿಡ ನೆಡುವಂತೆ, ಪರಿಸರ ರಕ್ಷಣೆ ಮಾಡುವಂತೆ ಜಾಗೃತಿ ಮೂಡಿಸುವುದು, ಕರೆ ನೀಡುವುದು ಇತ್ಯಾದಿ ಮಾಡಲಾಗುತ್ತದೆ. ಅದೇ ರೀತಿ ಬಿಹಾರದ ಜೆಡಿಯು ಪಕ್ಷ ಸೇರಬೇಕೆಂದರೆ ವರ್ಷವಿಡೀ ಗಿಡ ನೆಡಬೇಕು, ಈ ಒಂದು ನಿಯಮ ಪಾಲಿಸಿದರೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸದಸ್ಯರಾಗಬಹುದು.
ಜೆಡಿಯುನ ಈ ನಿಯಮದಿಂದಾಗಿ ಕಳೆದ 13 ವರ್ಷಗಳಲ್ಲಿ ಬಿಹಾರದಲ್ಲಿ ಹಸಿರುವಲಯಗಳ ಪ್ರಮಾಣ ಶೇಕಡಾ 6ರಿಂದ ಶೇಕಡಾ 13ಕ್ಕೆ ಏರಿಕೆಯಾಗಿದೆ. ನಮ್ಮ ದೇಶದಲ್ಲಿ ಈ ವಿಶಿಷ್ಟ ಪದ್ದತಿಯನ್ನು ಪಾಲಿಸಿಕೊಂಡು ಬಂದಿರುವ ಏಕೈಕ ಪಕ್ಷ ಜೆಡಿಯು ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


