ದೇಶ

ವಧುವಿನ ವೇಷದಲ್ಲಿದ್ದ ಸೇನಾ ನರ್ಸ್ ಕೊಚ್ಚಿ ವ್ಯಕ್ತಿಗೆ ಹಾಕಿದಳು 15 ಲಕ್ಷಕ್ಕೆ ಪಂಗನಾಮ!

ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ವಧುವಿನ ವೇಷದಲ್ಲಿದ್ದ ಸೇನಾ ನರ್ಸ್ ಕೊಚ್ಚಿ ವ್ಯಕ್ತಿಗೆ 15 ಲಕ್ಷಕ್ಕೆ ಪಂಗನಾಮ ಹಾಕಿದ್ದಾರೆ.

ವಧುವಿನ ವೇಷದಲ್ಲಿದ್ದ ಸೇನಾ ನರ್ಸ್ ಕೊಚ್ಚಿ ವ್ಯಕ್ತಿಗೆ ಹಾಕಿದಳು 15 ಲಕ್ಷಕ್ಕೆ ಪಂಗನಾಮ!
ವಧುವಿನ ವೇಷದಲ್ಲಿದ್ದ ಸೇನಾ ನರ್ಸ್ ಕೊಚ್ಚಿ ವ್ಯಕ್ತಿಗೆ ಹಾಕಿದಳು 15 ಲಕ್ಷಕ್ಕೆ ಪಂಗನಾಮ!
Published On :
ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ವಧುವಿನ ವೇಷದಲ್ಲಿದ್ದ ಸೇನಾ ನರ್ಸ್ ಕೊಚ್ಚಿ ವ್ಯಕ್ತಿಗೆ 15 ಲಕ್ಷಕ್ಕೆ ಪಂಗನಾಮ ಹಾಕಿದ್ದಾರೆ. 
ಕೊಚ್ಚಿ ಪೊಲೀಸರು ನರ್ಸ್ ನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಸ್ಮಿತಾ (43) ಎಂದು ಗುರುತಿಸಲಾಗಿದ್ದು, ತಿರುವನಂತಪುರಂ ನ ವೆಟ್ಟಮುಕ್ಕುವಿನ ಸೌಂದರ್ಯ ಹೌಸ್ ನ ನಿವಾಸಿ ಎಂದು ಗುರುತಿಸಲಾಗಿದೆ. 
ಪ್ಯಾಂಗೋಡ್ ಸೇನಾ ಕ್ಯಾಂಪ್ ನ ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಈಕೆಯ ವಿರುದ್ಧ ವ್ಯಕ್ತಿಯೋರ್ವ 15 ಲಕ್ಷ ರೂಪಾಯಿಗೆ ವಂಚನೆ ಮಾಡಿರುವ ಆರೋಪ ಮಾಡಿದ್ದರು. ವ್ಯಕ್ತಿಯ ದೂರನ್ನು ಆಧರಿಸಿ ಪೊಲೀಸರು ನರ್ಸ್ ನ್ನು ಬಂಧಿಸಿದ್ದಾರೆ. 
ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ನಕಲಿ ಖಾತೆ ತೆರೆದಿದ್ದ ನರ್ಸ್ ಜೊತೆ ವ್ಯಕ್ತಿ ಚಾಟಿಂಗ್ ಆರಂಭಿಸಿದ್ದಾರೆ. ಈ ವೇಳೆ ತಾನು ಕೋಲ್ಕತ್ತಾದಲ್ಲಿ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿರುವುದಾಗಿ ನರ್ಸ್ ಹೇಳಿದ್ದಾರೆ.
ಕೊಚ್ಚಿ ವ್ಯಕ್ತಿಯ ನಂಬಿಕೆ ಗಳಿಸಿದ ನಂತರ ತನಗೆ ತುರ್ತು ಅಗತ್ಯವಿರುವುದರಿಂದ 15 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ತನಗೆ ಹಣ ಸಂದಾಯವಾಗುತ್ತಿದ್ದಂತೆಯೇ ನರ್ಸ್ ವ್ಯಕ್ತಿಯೊಂದಿಗೆ ಮಾತನಾಡುವುದರಲ್ಲಿ ಆಸಕ್ತಿ ಕಮ್ಮಿ ಮಾಡಿದ್ದಾರೆ.  ಕೆಲವು ದಿನಗಳ ನಂತರ ತನಗೆ ಕ್ಯಾನ್ಸರ್ ಇರುವುದಾಗಿಯೂ ವಿವಾಹವಾಗಲು ಸಾಧ್ಯವಿಲ್ಲ ಎಂದೂ ತಿಳಿಸಿದ್ದಾಳೆ. ತಾನು ಹುಡುಗಿಗೆ ಹಣ ನೀಡಿರುವ ವಿಷಯವನ್ನು ಮೋಸ ಹೋದ ವ್ಯಕ್ತಿ ಮನೆಯವರಿಂದ ಮುಚ್ಚಿಟ್ಟಿದ್ದಾನೆ. ಕೆಲವು ದಿನಗಳ ನಂತರ ಮ್ಯಾಟ್ರಿಮೋನಿ ಸೈಟ್ ನಲ್ಲಿ ಅಂಥಹದ್ದೇ ಮತ್ತೊಂದು ಪ್ರೊಫೈಲ್ ನೋಡಿದಾಗ ಅನುಮಾನಗೊಂಡು ವ್ಯಕ್ತಿ ಕೊಚ್ಚಿ ಪೊಲೀಸರಿಗೆ ದೂರು ನೀಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.