ದೇಶ

ಬಿಜೆಪಿ ಶಾಸಕ ಆರೋಪಿ ಉನ್ನಾವೋ ಗ್ಯಾಂಗ್ ರೇಪ್: ಅಪಘಾತದಲ್ಲಿ ಸಂತ್ರಸ್ತೆಗೆ ಗಂಭೀರ ಗಾಯ, ಸಾಕ್ಷಿ ಸಾವು!

ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಗಾರ್ ಪ್ರಮುಖ ಆರೋಪಿಯಾಗಿರುವ ಉನ್ನವೋ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಭಾರೀ ತಿರುವು ಪಡೆದುಕೊಂಡಿದ್ದು ಇಂದು ಸಂಭವಿಸಿದ ಭೀಕರ...

ಬಿಜೆಪಿ ಶಾಸಕ ಆರೋಪಿ ಉನ್ನಾವೋ ಗ್ಯಾಂಗ್ ರೇಪ್: ಅಪಘಾತದಲ್ಲಿ ಸಂತ್ರಸ್ತೆಗೆ ಗಂಭೀರ ಗಾಯ, ಸಾಕ್ಷಿ ಸಾವು!
ಸಂಗ್ರಹ ಚಿತ್ರ
Published On :
ಲಖನೌ: ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಗಾರ್ ಪ್ರಮುಖ ಆರೋಪಿಯಾಗಿರುವ ಉನ್ನವೋ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಭಾರೀ ತಿರುವು ಪಡೆದುಕೊಂಡಿದ್ದು ಇಂದು ಸಂಭವಿಸಿದ ಭೀಕರ ಅಪಘಾತ ಅತ್ಯಾಚಾರ ಸಂತ್ರಸ್ತೆ ಗಂಭೀರ ಗಾಯಗೊಂಡಿದ್ದು, ಪ್ರಕರಣದ ಪ್ರಮುಖ ಸಾಕ್ಷಿ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಉನ್ನಾವೋ ಮತ್ತು ಲಾಲ್ ಗಂಜ್ ವಿಭಾಗದಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ 232ರಲ್ಲಿ ಅಪಘಾತ ಸಂಭವಿಸಿದ್ದು ಅತ್ಯಾಚಾರ ಸಂತ್ರಸ್ತೆ, ಆಕೆಯ ವಕೀಲೆ ಮತ್ತು ಪ್ರಮುಖ ಸಾಕ್ಷಿ ತೆರಳುತ್ತಿದ್ದ ಕಾರಿಗೆ ಟ್ರಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. 
ಸಂತ್ರಸ್ತೆ ಮತ್ತು ಆಕೆಯ ತಾಯಿಗೆ ಗಂಭೀರ ಗಾಯವಾಗಿದ್ದು ತಾಯಿಯನ್ನು ಲಖನೌದ ಟ್ರಾಮ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು ಸಂತ್ರಸ್ತೆ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.