ನೂರು ದಿನಗಳಲ್ಲಿ ಮೂರು ಮೆಟ್ರೋ ಲೈನ್ ಗಳ ಕಾರ್ಯಾರಂಭದ ಗುರಿ
ಕೊಚ್ಚಿ, ನಾಗ್ಪುರ ಮತ್ತು ದೆಹಲಿಯ ಮೂರು ಮೆಟ್ರೋ ಲೈನ್ ಗಳು ಮುಂದಿನ 100 ದಿನಗಳಲ್ಲಿ ಕಾರ್ಯಾರಂಭ ಮಾಡುವ ಗುರಿ ಹೊಂದಿದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Published On :
ನವದೆಹಲಿ: ಕೊಚ್ಚಿ, ನಾಗ್ಪುರ ಮತ್ತು ದೆಹಲಿಯ ಮೂರು ಮೆಟ್ರೋ ಲೈನ್ ಗಳು ಮುಂದಿನ 100 ದಿನಗಳಲ್ಲಿ ಕಾರ್ಯಾರಂಭ ಮಾಡುವ ಗುರಿ ಹೊಂದಿದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಮುಂದಿನ 100 ದಿನಗಳಲ್ಲಿ 5.6ಕಿ.ಮೀ ಮಹಾರಾಜ ಕಾಲೇಜಿನಿಂದ ಥೈಕೋಡಂ, ಕೊಚ್ಚಿ ಮೆಟ್ರೋ ಸೇರಿದಂತೆ ಮೂರು ಮಾರ್ಗಗಳನ್ನು (21 ಕಿ.ಮೀ) ಕಾರ್ಯಾರಂಭಗೊಳಿಸಲು ತರಲು ಉದ್ದೇಶಿಸಲಾಗಿದೆ. ದ್ವಾರಕಾದಿಂದ ನಜಾಫಘರ್ 4.3 ಕಿ.ಮೀ, ದೆಹಲಿ ಮೆಟ್ರೋ 11 ಕಿ.ಮೀ, ಲೋಕಮಾನ್ಯ ನಗರದಿಂದ ಸೀತಬುಲ್ಡಿ, ನಾಗ್ಪುರದ ವರೆಗೆ ಮೆಟ್ರೋ ವಿಸ್ತರಿಸಲಾಗುವುದೆಂದು ತಿಳಿಸಿದೆ.
2014ರ ತನಕ ದೇಶದ ಏಳು ನಗರಗಳಲ್ಲಿ (ಕೋಲ್ಕತಾ, ದೆಹಲಿ, ಗಾಜಿಯಾಬಾದ್, ನೋಯ್ಡಾ, ಗುರುಗ್ರಾಮ್, ಬೆಂಗಳೂರು ಮತ್ತು ಮುಂಬೈ) ಸುಮಾರು 247 ಕಿ.ಮೀ ಮೆಟ್ರೋ ರೈಲು ಕಾರ್ಯ ನಿರ್ವಹಿಸುತ್ತಿತ್ತು. ಈಗ ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ, ಘಾಜಿಯಾಬಾದ್, ಗುರುಗ್ರಾಮ, ಫರೀದಾಬಾದ್, ಬಲ್ಲಬ್ ಘರ್, ಬಹದ್ದೂರ್ ಘರ್, ಜೈಪುರ್, ಲಖನೌ, ಕೋಲ್ಕತಾ, ಅಹಮದಾಬಾದ್, ಮುಂಬೈ, ನಾಗ್ಪುರ, ಹೈದರಾಬಾದ್, ಬೆಂಗಳೂರು, ಚೆನ್ನೈ ಸೇರಿ ಒಟ್ಟು ನಗರಗಳಲ್ಲಿ 657 ಕಿ.ಮೀ ಮೆಟ್ರೋ ರೈಲು ಕಾರ್ಯ ನಿರ್ವಹಿಸುತ್ತಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


