ದೇಶ

ಹೈದರಾಬಾದ್‌ನಲ್ಲಿ ಅಮೆರಿಕ ಮೂಲದ ಟೆಕ್ಕಿಯ ದುರಂತ ಸಾವು: ಭೀಕರ ವಿಡಿಯೋ!

ಅಮೆರಿಕ ಮೂಲದ ಟೆಕ್ಕಿಯೊಬ್ಬ ಸ್ನೇಹಿತರೊಂದಿಗೆ ಅಡ್ವೆಂಜರ್ ರೆಸಾರ್ಟಿಗೆ ತೆರಳಿದ್ದ ವೇಳೆ ಎಟಿವಿ ಬೈಕ್ ರೈಡಿಂಗ್ ವೇಳೆ ದಾರುಣ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಹೈದರಾಬಾದ್‌ನಲ್ಲಿ ಅಮೆರಿಕ ಮೂಲದ ಟೆಕ್ಕಿಯ ದುರಂತ ಸಾವು: ಭೀಕರ ವಿಡಿಯೋ!
ಸಂಗ್ರಹ ಚಿತ್ರ
Published On :
ಹೈದರಾಬಾದ್: ಅಮೆರಿಕ ಮೂಲದ ಟೆಕ್ಕಿಯೊಬ್ಬ ಸ್ನೇಹಿತರೊಂದಿಗೆ ಅಡ್ವೆಂಜರ್ ರೆಸಾರ್ಟಿಗೆ ತೆರಳಿದ್ದ ವೇಳೆ ಎಟಿವಿ ಬೈಕ್ ರೈಡಿಂಗ್ ವೇಳೆ ದಾರುಣ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಅಮೆರಿಕದ ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ 45 ವರ್ಷದ ಅರವಿಂದ್ ಕುಮಾರ್ ಮೃತಪಟ್ಟ ದುರ್ದೈವಿ. ಎಟಿವಿ ಬೈಕ್ ರೈಡಿಂಗ್ ವೇಳೆ ಏಕಾಏಕಿ ಮುಗ್ಗರಿಸಿ ಬಿದ್ದ ಪರಿಣಾಮ ಅರವಿಂದ್ ಮೃತಪಟ್ಟಿದ್ದಾರೆ. ಈ ಅಪಘಾತ ಭೀಕರ ದೃಶ್ಯಗಳು ಸ್ನೇಹಿತರ ಮೊಬೈಲ್ ನಲ್ಲಿ ಸೆರೆಯಾಗಿದೆ. 
ಸ್ನೇಹಿತರ ಮನೆಯಲ್ಲಿ ನಡೆಯಬೇಕಿದ್ದ ಶುಭ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಅರವಿಂದ್ ಹೈದರಾಬಾದ್ ಗೆ ಆಗಮಿಸಿದ್ದರು. ಈ ವೇಳೆ ಸ್ನೇಹಿತರೊಂದಿಗೆ ಎಟಿವಿ ರೈಡಿಂಗ್ ಗೆ ತೆರಳಿದ್ದರು. ದುರ್ಘಟನೆ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದ ಅರವಿಂದ್ ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತು. ಆದರೆ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.