ದೇಶ

ಎದೆ ಮೇಲೆ ಮಂಗಳಮುಖಿ ಹಚ್ಚೆ: 3 ವರ್ಷದ ಬಳಿಕ ಟಿಕ್‌ಟಾಕ್‌ನಿಂದ ಪತ್ನಿಗೆ ಸಿಕ್ತು ಗಂಡನ ಸುಳಿವು!

ಎರಡು ಮುದ್ದಾದ ಮಗುವಿನ ತಂದೆ ಕಳೆದ ಮೂರು ವರ್ಷಗಳ ಹಿಂದೆ ಪತ್ನಿಯನ್ನು ಬಿಟ್ಟು ಪರಾರಿಯಾಗಿದ್ದ. ಪತಿ ಬದುಕಿದ್ದಾನೋ ಇಲ್ಲವೋ ಎಂಬ ಆತಂಕದಲ್ಲಿದ್ದ ಪತ್ನಿಗೆ ಸಿಕ್ತು ಟಿಕ್‌ಟಾಕ್‌ ವಿಡಿಯೋಗಳಿಂದ ಪತಿಯ ಸುಳಿವು.

ಎದೆ ಮೇಲೆ ಮಂಗಳಮುಖಿ ಹಚ್ಚೆ: 3 ವರ್ಷದ ಬಳಿಕ ಟಿಕ್‌ಟಾಕ್‌ನಿಂದ ಪತ್ನಿಗೆ ಸಿಕ್ತು ಗಂಡನ ಸುಳಿವು!
ಸಂಗ್ರಹ ಚಿತ್ರ
Published On :
ಎರಡು ಮುದ್ದಾದ ಮಗುವಿನ ತಂದೆ ಕಳೆದ ಮೂರು ವರ್ಷಗಳ ಹಿಂದೆ ಪತ್ನಿಯನ್ನು ಬಿಟ್ಟು ಪರಾರಿಯಾಗಿದ್ದ. ಪತಿ ಬದುಕಿದ್ದಾನೋ ಇಲ್ಲವೋ ಎಂಬ ಆತಂಕದಲ್ಲಿದ್ದ ಪತ್ನಿಗೆ ಸಿಕ್ತು ಟಿಕ್‌ಟಾಕ್‌ ವಿಡಿಯೋಗಳಿಂದ ಪತಿಯ ಸುಳಿವು. 
2013ರಲ್ಲಿ ತಮಿಳುನಾಡಿನ ವಿಲ್ಲಂಪುರಂ ಜಿಲ್ಲೆಯ ಸುರೇಶ್ ಎಂಬಾತ ಜಯಪ್ರದ ಜೊತೆ ಮದುವೆಯಾಗಿದ್ದ. ಇಬ್ಬರ ದಾಂಪತ್ಯ ಸಾಕ್ಷಿಗೆ ಎರಡು ಮಕ್ಕಳಿವೆ. ಆದರೆ 2016ರಲ್ಲಿ ಸುರೇಶ್ ನಾಪತ್ತೆಯಾಗಿದ್ದ. ಪತಿ ನಾಪತ್ತೆಯಾಗಿದ್ದರಿಂದ ಕಂಗಾಲಾದ ಜಯಪ್ರದ ಪೊಲೀಸರಿಗೆ ದೂರು ನೀಡಿದ್ದರು. 
ಸುರೇಶ್ ಕುರಿತು ತನಿಖೆ ಕೈಗೊಂಡ ಪೊಲೀಸರಿಗೆ ಆತನನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಆದರೆ ಇತ್ತೀಚೆಗೆ ಸುರೇಶ್ ಟಿಕ್ ಟಾಕ್ ವಿಡಿಯೋಂದರಲ್ಲಿ ಕಾಣಿಸಿಕೊಂಡಿದ್ದ ಈ ವಿಡಿಯೋ ನೋಡಿದ ಸಂಬಂಧಿಕರು ಜಯಪ್ರದಗೆ ಹೇಳಿದ್ದಾರೆ. 
ಕೂಡಲೇ ಜಯಪ್ರದ ಪೊಲೀಸರಿಗೆ ಮಾಹಿತಿ ರವಾನಿಸಿದ್ದು ಕಾರ್ಯಪ್ರವರ್ತರಾದ ಪೊಲೀಸರು ಸುರೇಶ್ ನನ್ನು ಪತ್ತೆ ಹಚ್ಚಿದ್ದಾರೆ. ಅಲ್ಲಿ ಪೊಲೀಸರಿಗೆ ಮತ್ತು ಕುಟುಂಬಸ್ಥರಿಗೆ ಶಾಕ್ ಕಾದಿತ್ತು. ಹೌದು ಸುರೇಶ್ ಮಂಗಳಮುಖಿಯನ್ನು ಎರಡನೇ ಮದುವೆಯಾಗಿ ಹೊಸೂರಿನಲ್ಲಿ ಜೀವನ ಸಾಗಿಸುತ್ತಿದ್ದ ಎಂಬುದು ತಿಳಿದುಬಂದಿದೆ. ಸದ್ಯ ಮಂಗಳಮುಖಿಯಿಂದ ಸುರೇಶ್ ನನ್ನು ಜಯಪ್ರದಗೆ ಒಪ್ಪಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.