ದೇಶ

'ಲೋಕ' ಚುನಾವಣೆ ಹೊಸ್ತಿಲಲ್ಲೇ 'ಕೈ'ಗೆ ಮುಖಭಂಗ: ಜಿಂದ್ ಉಪಚುನಾವಣೆ ಬಿಜೆಪಿಗೆ ಭರ್ಜರಿ ಜಯ

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ದೇಶದಲ್ಲಿ ನಡೆಯುವ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಫಲಿತಾಂಶ ರಾಷ್ಟ್ರೀಯ ಪಕ್ಷಗಳ ಕೈ ಬಲ ಮಾಡುತ್ತದೆ. ಅಂತೆ ಜಿಂದ್ ಉಪಚುನಾವಣೆಯಲ್ಲಿ...

'ಲೋಕ' ಚುನಾವಣೆ ಹೊಸ್ತಿಲಲ್ಲೇ 'ಕೈ'ಗೆ ಮುಖಭಂಗ: ಜಿಂದ್ ಉಪಚುನಾವಣೆ ಬಿಜೆಪಿಗೆ ಭರ್ಜರಿ ಜಯ
ಸಂಗ್ರಹ ಚಿತ್ರ
Published On :
ಜಿಂದ್: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ದೇಶದಲ್ಲಿ ನಡೆಯುವ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಫಲಿತಾಂಶ ರಾಷ್ಟ್ರೀಯ ಪಕ್ಷಗಳ ಕೈ ಬಲ ಮಾಡುತ್ತದೆ. ಅಂತೆ ಜಿಂದ್ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದೆ. 
ಜನನಾಯಕ ಜನತಾ ಪಕ್ಷ(ಜೆಜೆಪಿ)ದ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಚೌಟಾಲಾರನ್ನು ಬಿಜೆಪಿ ಅಭ್ಯರ್ಥಿ ಕೃಷನ್ ಲಾಲ್ ಮಿಡ್ಡಾ ಅವರು 12,935 ಮತಗಳ ಅಂತರದಿಂದ ಸೋಲಿಸಿದ್ದಾರೆ. 
ಕೃಷನ್ ಲಾಲ್ ಮಿಡ್ಡಾ ಒಟ್ಟು 50,566 ಮತಗಳನ್ನು ಪಡೆದರೆ, ಜೆಜೆಪಿಯ ಚೌಟಾಲಾಗೆ 37,631 ಮತಗಳು ಲಭಿಸಿವೆ. ಇನ್ನು ಕಾಂಗ್ರೆಸ್ ನ ಆರ್ ಎಸ್ ಸುರ್ ಜೇವಾಲಾ ಅವರಿಗೆ 22,740 ಮತಗಳು ದೊರಕಿವೆ. 
ಹಾಲಿ ಶಾಸಕನಾಗಿದ್ದು ಕಣಕ್ಕಿಳಿಸಲ್ಪಟ್ಟಿದ್ದ ಕಾಂಗ್ರೆಸ್ ವಕ್ತಾರ ಬಲಿಷ್ಠ ಅಭ್ಯರ್ಥಿ ರಣದೀಪ್ ಸುರ್ ಜೇವಾಲಾ ಅವರು ತೃತೀಯ ಸ್ಥಾನಕ್ಕಿಳಿದದ್ದು ಕಾಂಗ್ರೆಸ್ ಗೆ ಭಾರೀ ಮುಖಭಂಗವಾದಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.