ದೇಶ

ಭ್ರಷ್ಟ, ಕ್ರೂರಿ ಬಿಜೆಪಿ ಸರ್ಕಾರ: ಎನ್ ಸಿಪಿ ಸೇರಿದ ಶಂಕರ್ ಸಿಂಗ್ ವಾಘೇಲಾ ವಾಗ್ದಾಳಿ

ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಾಘೇಲಾ ಇಂದು ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ-ಎನ್ ಸಿಪಿ ಸೇರ್ಪಡೆಯಾಗಿದ್ದಾರೆ

ಭ್ರಷ್ಟ, ಕ್ರೂರಿ ಬಿಜೆಪಿ ಸರ್ಕಾರ: ಎನ್ ಸಿಪಿ ಸೇರಿದ ಶಂಕರ್ ಸಿಂಗ್ ವಾಘೇಲಾ ವಾಗ್ದಾಳಿ
ಶಂಕರ್ ಸಿಂಗ್ ವಾಘೇಲಾ
Published On :

ಅಹಮದಾಬಾದ್: ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್  ಸಿಂಗ್ ವಾಘೇಲಾ ಇಂದು  ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ-ಎನ್ ಸಿಪಿ ಸೇರ್ಪಡೆಯಾಗಿದ್ದಾರೆ. ಶರದ್ ಪವರ್ ಅವರ ಸಮ್ಮುಖದಲ್ಲಿ ಎನ್ ಸಿಪಿಗೆ ಸೇರ್ಪಡೆಯಾದ ಶಂಕರ್ ಸಿಂಗ್ ವಾಘೇಲಾ, ಭ್ರಷ್ಟ, ಕ್ರೂರಿ ಬಿಜೆಪಿ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.

ಗುಜರಾತಿನ ಜನ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಅವರಿಗೆ ಏನನ್ನಾದರೂ ಹಿಂದಕ್ಕೆ ಕೊಡಬೇಕು. ಅದಕ್ಕಾಗಿ ಎನ್ ಸಿಪಿಗೆ ಸೇರ್ಪಡೆಯಾಗಿದ್ದು,ಮುಂದಿನ ದಿನಗಳಲ್ಲಿ ಯುಪಿಎ-3ಯಂತೆ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಹೇಳಿದರು.
ಪ್ರಸ್ತುತದಲ್ಲಿನ ಬಿಜೆಪಿ ಸರ್ಕಾರ ಕ್ರೂರಿ ಹಾಗೂ ಭ್ರಷ್ಟಾಚಾರದಿಂದ ಕೂಡಿದೆ. ಅವರು ಹೇಳುವುದೆಲ್ಲಾ ಸುಳ್ಳು ಹಾಗೂ ಜನರು ಕೂಡಾ ಈ ಸರ್ಕಾರದಿಂದ ಬೇಸತ್ತಿದ್ದಾರೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.