ದೇಶ

ಬಿಹಾರ: ಪಾಟ್ನಾದಲ್ಲಿ ರಾಮನ ಅವತಾರದ ರಾಹುಲ್ ಗಾಂಧಿ ಪೋಸ್ಟರ್!

ತಿಂಗಳ ಹಿಂದೆ ಶಿವಭಕ್ತ ಎಂದು ಕರೆಸಿಕೊಂಡಿದ್ದ ರಾಹುಲ್ ಗಾಂಧಿ ಈಗ ಒಂದು ಹೆಜ್ಜೆ ಮುಂದೆ ಸಾಗಿದ್ದು, ಶ್ರೀರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಹಾರ: ಪಾಟ್ನಾದಲ್ಲಿ ರಾಮನ ಅವತಾರದ ರಾಹುಲ್ ಗಾಂಧಿ ಪೋಸ್ಟರ್!
ರಾಹುಲ್ ಗಾಂಧಿ ಪೋಸ್ಟರ್
Published On :
ಪಾಟ್ನಾ : ತಿಂಗಳ ಹಿಂದೆ ಶಿವಭಕ್ತ ಎಂದು ಕರೆಸಿಕೊಂಡಿದ್ದ ರಾಹುಲ್ ಗಾಂಧಿ ಈಗ ಒಂದು ಹೆಜ್ಜೆ ಮುಂದೆ ಸಾಗಿದ್ದು, ಶ್ರೀರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಹಾರದ ಪಾಟ್ನಾದಲ್ಲಿ ಹಾಕಿರುವ ಪೋಸ್ಟರ್ ವೊಂದರಲ್ಲಿ ಹೀಗೆ ರಾಮನ ಅವತಾರದಲ್ಲಿ ರಾಹುಲ್ ಗಾಂಧಿ ಪೋಸ್ ನೀಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತ ವಿಜಯ್ ಕುಮಾರ್ ಸಿಂಗ್ ಎಂಬವರು ಈ ರೀತಿಯ ಪೋಸ್ಟರ್ ಹಾಕಿದ್ದಾರೆ.  
ಈ ಕುರಿತಂತೆ ಪ್ರತಿಕ್ರಿಯಿಸಿರುವ ವಿಜಯ್ ಕುಮಾರ್ ಸಿಂಗ್,  ರಾಹುಲ್ ಗಾಂಧಿ ಶ್ರೀರಾಮನ ಎಲ್ಲಾ ಗುಣಗಳನ್ನು ಹೊಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಮನ ಹೆಸರಿನಲ್ಲಿ  ರಾಜಕೀಯ ಮಾಡಿದಂತೆ ರಾಹುಲ್ ಗಾಂಧಿ ಮಾಡುವುದಿಲ್ಲ.ದೇಶದ ಅಭಿವೃದ್ಧಿಗಾಗಿ ಹಲವು ವರ್ಷಗಳ ಕಾಲ ಕಾಂಗ್ರೆಸ್ ಶ್ರಮಿಸಿದೆ. ಎಲ್ಲಾ ಪ್ರಮುಖವಾದ ಕ್ರಾಂತಿಗಳು ಹಾಗೂ ಯೋಜನೆಗಳು  ಕಾಂಗ್ರೆಸ್  ಆಡಳಿತಾವಧಿಯಲ್ಲಿಯೇ ಜಾರಿಗೆ ಬಂದಿವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.