ಕೊಹ್ಲಿ ಹೇಳಿದ ರೆಕಾರ್ಡ್, ರೋಜರ್ ಫೆಡರರ್, ರೊಮ್ಯಾಂಟಿಕ್ ಗೇಟ್ ವೇ ಕಥೆ
ವಿದೇಶಿ ನೆಲದಲ್ಲಿ ಟೂರ್ನಿ ನಡೆಯುವಾಗ ಆಟಗಾರರ ಪತ್ನಿಯರು ಸರಣಿ ಮುಕ್ತಾಯಗೊಳ್ಳುವವರೆಗೂ ಅಲ್ಲೇ ಇರುವುದಕ್ಕೆ ಅನುಮತಿ ನೀಡಬೇಕೆಂದು ಕೊಹ್ಲಿ ಈ ಹಿಂದೆ ಪಟ್ಟು ಹಿಡಿದಿದ್ದರು.

Published On :
ಮೌಂಟ್ ಮಂಗೂನ್ಯು: ವಿದೇಶಿ ನೆಲದಲ್ಲಿ ಟೂರ್ನಿ ನಡೆಯುವಾಗ ಆಟಗಾರರ ಪತ್ನಿಯರು ಸರಣಿ ಮುಕ್ತಾಯಗೊಳ್ಳುವವರೆಗೂ ಅಲ್ಲೇ ಇರುವುದಕ್ಕೆ ಅನುಮತಿ ನೀಡಬೇಕೆಂದು ಕೊಹ್ಲಿ ಈ ಹಿಂದೆ ಪಟ್ಟು ಹಿಡಿದಿದ್ದರು. ಈಗ ಸರಣಿ ಮಧ್ಯೆ ಸಮಯ ಸಿಕ್ಕಾಗ ತಮ್ಮ ದಿನಚರಿ ಹೇಗಿರುತ್ತದೆ ಎಂಬುದನ್ನು ಸ್ವತಃ ಕೊಹ್ಲಿಯೇ ಬಹಿರಂಗಪಡಿಸಿದ್ದಾರೆ.
ಸಧ್ಯಕ್ಕೆ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗಾಗಿ ನ್ಯೂಜಿಲ್ಯಾಂಡ್ ನಲ್ಲಿರುವ ಕೊಹ್ಲಿ, ಪತ್ನಿ ಅನುಷ್ಕಾ ಜೊತೆ ಮಧುರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್ ನ್ನೂ ಭೇಟಿ ಮಾಡಿದ್ದಾರೆ. ಈ ಎಲ್ಲವನ್ನೂ ಕೊಹ್ಲಿ ಸ್ಕೈ ಸ್ಪೋರ್ಟ್ಸ್ ಜೊತೆಗೆ ಹಂಚಿಕೊಂಡಿದ್ದು, ಬಿಸಿಸಿಐ ಸಂದರ್ಶನವನ್ನು ಪ್ರಕಟಿಸಿದೆ.
ನ್ಯೂಜಿಲ್ಯಾಂಡ್ ನಂತಹ ಅದ್ಭುತ ಪ್ರದೇಶದಲ್ಲಿ ನನ್ನ ಪತ್ನಿಯೊಂದಿಗೆ ವಾಕಿಂಗ್ ಹೋಗಲು ಇಷ್ಟಪಡುತ್ತೇನೆ, ಪೂರ್ಣ ಚಂದ್ರನ ಬೆಳದಿಂಗಳನ್ನು ಸವಿಯಲು ಇಷ್ಟಪಡುತ್ತೇನೆ ಎಂದು ಕೊಹ್ಲಿ ಸ್ಕೈ ಸ್ಪೋರ್ಟ್ಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಬಹುತೇಕ ಸಂದರ್ಭಗಳಲ್ಲಿ, ಇಬ್ಬರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಅನುಯಾಯಿಗಳಿರುವುದರಿಂದ ನಮಗೆ ಸಿಗುವ ಕಡಿಮೆ ಸಮಯವನ್ನೂ ಆನಂದಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ ನಮ್ಮನ್ನು ಹೆಚ್ಚು ಗುರುತಿಸದೇ ಇರುವ ಪ್ರದೇಶಗಳಲ್ಲಿ ಪತ್ನಿಯೊಂದಿಗೆ ಮಾತನಾಡುತ್ತಾ ಸುದೀರ್ಘವಾದ ವಾಕ್ ಹೋಗುವುದಕ್ಕೆ ಇಷ್ಟಪಡುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.
ಇದೇ ವೇಳೆ ಕೊಹ್ಲಿ ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್ ನ್ನೂ ಭೇಟಿ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ತನ್ನನ್ನು ಭೇಟಿ ಮಾಡಿದ್ದನ್ನು ರೋಜರ್ ಫೆಡರರ್ ಸಹ ನೆನಪಿಸಿಕೊಂಡರು ಎಂದು ಕೊಹ್ಲಿ ಹೇಳಿದ್ದಾರೆ,
ಕೆಲವು ವರ್ಷಗಳ ಹಿಂದೆ ರೋಜರ್ ಫೆಡರರ್ ನ್ನು ಭೇಟಿ ಮಾಡಿದ್ದೆ. ಅದನ್ನು ಅವರು ಈಗಲೂ ನೆನಪಿನಲ್ಲಿಟ್ಟುಕೊಂಡಿದ್ದಾರೆ, ಆ ಅನುಭೂತಿಯನ್ನು ನಾನು ವರ್ಣಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


