ನಿವೃತ್ತ ಸೇನಾನಿಗಳೊಂದಿಗೆ ಉರಿ ಸಿನಿಮಾ ವೀಕ್ಷಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜ.27 ರಂದು ಬೆಂಗಳೂರಿಗೆ ಭೇಟಿ ನೀಡಿದ್ದು, ನಿವೃತ್ತ ಸೇನಾನಿಗಳೊಂದಿಗೆ ಉರಿ ಸಿನಿಮಾ ವೀಕ್ಷಿಸಿದ್ದಾರೆ.

Published On :
ಬೆಂಗಳೂರು: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜ.27 ರಂದು ಬೆಂಗಳೂರಿಗೆ ಭೇಟಿ ನೀಡಿದ್ದು, ನಿವೃತ್ತ ಸೇನಾನಿಗಳೊಂದಿಗೆ ಉರಿ ಸಿನಿಮಾ ವೀಕ್ಷಿಸಿದ್ದಾರೆ.
ಬೆಳ್ಳಂದೂರಿನ ಬೆಳ್ಳಂದೂರು ಪಿವಿಆರ್ ಸೆಂಟ್ರಲ್ ಮಾಲ್‌ನಲ್ಲಿ ಜನವರಿ 27ರಂದು ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ನಿರ್ಮಲಾ ಸೀತಾರಾಮನ್ ಸಿನಿಮಾ ವೀಕ್ಷಿಸಿದ್ದು, ಸಿನಿಮಾ ವೀಕ್ಷಿಸಿದ್ದರ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ. ಮಾಲ್ ಗೆ ತೆರಳುತ್ತಿರುವ ವಿಡಿಯೋ ಹಾಕಿರುವ ನಿರ್ಮಲಾ ಸೀತಾರಾಮನ್, ಅವರು ಹಾಲ್ ಗೆ ಪ್ರವೇಶಿಸುತ್ತಿದ್ದಂತೆಯೇ ನೆರೆದಿದ್ದ ಜನ ವಂದೇ ಮಾತರಂ, ಭಾರತ್ ಮಾತಾ ಕೀ ಜೈ, ಹೌ ಈಸ್ ದಿ ಜೋಷ್ ಎಂಬ ಘೋಷಣೆಗಳನ್ನು ಕೂಗಿರುವ ವಿಡಿಯೋವನ್ನೂ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
And it starts. #highjosh pic.twitter.com/PV7EQqvD9e
— Nirmala Sitharaman (@nsitharaman) 27 January 2019ಇದೇ ವೇಳೆ ರಕ್ಷಣಾ ಸಚಿವರು ಸಿನಿಮಾ ಉರಿ ಚಿತ್ರದಲ್ಲಿ ನಟಿಸಿರುವ ವಿಕಿ ಕೌಶಲ್, ಯಾಮಿ ಗೌತಮ್, ಚಿತ್ರದ ನಿರ್ದೇಶಕ ಆದಿತ್ಯ ಧರ್ ಉರಿ ನಿರ್ಮಾಪಕ ರೋನಿ ಸ್ಕೃೂವಾಲಾ ಅವರನ್ನು ಟ್ಯಾಗ್ ಮಾಡಿದ್ದು, ಯೆಸ್ ಹೈ ಜೋಷ್ ಎಂದು ಟ್ವೀಟ್ ಮಾದಿದ್ದಾರೆ. ಜ.16 ರಂದು ಸೇನಾ ದಿನಾಚರಣೆ ಅಂಗವಾಗಿ ನಿರ್ಮಲಾ ಸೀತಾರಾಮನ್ ಉರಿ ಚಿತ್ರದ ನಟರಾದ ವಿಕಿ ಕೌಶಲ್, ಯಾಮಿ ಗೌತಮ್, ನಿರ್ದೇಶಕ ಆದಿತ್ಯ ಧರ್ ಹಾಗೂ ನಿರ್ಮಾಪಕ ರೋನಿ ಸ್ಕೃೂವಾಲಾ ಅವರನ್ನು ಭೇಟಿ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


