ದೇಶ

ಕಾರ್ಯಕ್ಷಮತೆ ಕೊರತೆ: ರಕ್ಷಣಾ ಸಚಿವಾಲಯದ ಐವರು ಅಧಿಕಾರಿಗಳು ಸೇವೆಯಿಂದ ವಜಾ

ಉದ್ಯೋಗದಲ್ಲಿ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯದಲ್ಲಿನ ಐವರು ನಾಗರಿಕ ಅಧಿಕಾರಿಗಳನ್ನು ವಜಾಗೊಳಿಸಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅನುಮೋದನೆ ನೀಡಿದ್ದಾರೆ.

ಕಾರ್ಯಕ್ಷಮತೆ ಕೊರತೆ: ರಕ್ಷಣಾ ಸಚಿವಾಲಯದ ಐವರು ಅಧಿಕಾರಿಗಳು ಸೇವೆಯಿಂದ ವಜಾ
ನಿರ್ಮಲಾ ಸೀತಾರಾಮನ್
Published On :

ನವದೆಹಲಿ: ಉದ್ಯೋಗದಲ್ಲಿ ಕಳಪೆ  ಪ್ರದರ್ಶನದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯದಲ್ಲಿನ ಐವರು ನಾಗರಿಕ ಅಧಿಕಾರಿಗಳನ್ನು ವಜಾಗೊಳಿಸಲು  ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅನುಮೋದನೆ ನೀಡಿದ್ದಾರೆ.

ಈ ಐವರು ಅಧಿಕಾರಿಗಳು ಸೇನೆಯ ಎಂಜಿನಿಯರಿಂಗ್ ಸೇವೆಗೆ ಸೇರಿದವರಾಗಿದ್ದಾರೆ.  ಇದು  ಸಶಸ್ತ್ರ ಪಡೆಗಳ  ಮಿಲಿಟರಿ ಕಟ್ಟಡಗಳ ನಿರ್ವಹಣೆ  ಮೇಲ್ವಿಚಾರಣೆ  ಹಾಗೂ ಮಿಲಿಟರಿ ಕಟ್ಟಡಗಳ ನಿರ್ವಹಣೆ ಮಾಡಲಿದೆ.

55 ವರ್ಷ ವಯಸ್ಸು  ಅಥವಾ   30 ವರ್ಷಗಳ ಸೇವೆ ಸಲ್ಲಿಸಿದ   ನಂತರ  ಕಾರ್ಯಕ್ಷಮತೆ ಕೊರತೆ ಕಾರಣ ಐವರು ಅಧಿಕಾರಿಗಳನ್ನು  ಕಡ್ಡಾಯ ನಿವೃತ್ತಿ ಮೇರೆಗೆ ಕಳುಹಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಮೇಲ್ವಿಚಾರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ಸಹಾಯಕ ಎಂಜಿನಿಯರ್  ಶ್ರೇಣಿಯಲ್ಲಿದ್ದ ಈ ಅಧಿಕಾರಿಗಳಿಗೆ ಮೂರು ತಿಂಗಳ ಸಂಬಂಳ ನೀಡಿ ಕಳುಹಿಸಲಾಗಿದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ 2015, ಸೆಪ್ಟೆಂಬರ್ 11ರ ಮಾರ್ಗಸೂಚಿಯಂತೆ  ಈ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.