'ಆಯುಷ್ಮಾನ್ ಭಾರತ್' ಯೋಜನೆಗೆ 100 ದಿನ: ಭಾರತ ಸರ್ಕಾರಕ್ಕೆ ಬಿಲ್ ಗೇಟ್ಸ್ ಅಭಿನಂದನೆ
ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ "ಆಯುಷ್ಮಾನ್ ಭಾರತ್" ಆರೋಗ್ಯ ಸೇವೆ ಯೋಜನೆಯ 100 ದಿನಗಳ ಯಶಸ್ಸಿಗಾಗಿ ಭಾರತ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Published On :
ನವದೆಹಲಿ: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ "ಆಯುಷ್ಮಾನ್ ಭಾರತ್" ಆರೋಗ್ಯ ಸೇವೆ ಯೋಜನೆಯ 100 ದಿನಗಳ ಯಶಸ್ಸಿಗಾಗಿ ಭಾರತ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
"ಆಯುಶ್ಮಾನ್ ಭಾರತ್" ಯೋಜನೆಯ ಮೊದಲ ನೂರು ದಿನಗಳ ಯಶಸ್ಸಿಗಾಗಿ ಭರತ ಸರ್ಕಾರಕ್ಕೆ ಅಭಿನಂದನೆಗಳು.ಮುಂದಿನ ದಿನಗಳಲ್ಲಿ ಈ ಯೋಜನೆ ಎಷ್ಟು ಸಂಖ್ಯೆಯ ಭಾರತೀಯರನ್ನು ತಲುಪಲಿದೆ ಎನ್ನುವುದನ್ನು ಕಾಣಲು ನಾನು ಉತ್ಸುಕನಾಗಿದ್ದೇನೆ" ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ದಾರೆ.
ಆಯುಶ್ಹ್ಮಾನ್ ಭಾರತ್ ಮೊದಲ ನೂರು ದಿನಗಳಲ್ಲಿ 685000 ಫಲಾನುಭವಿಗಳನ್ನು ತಲುಪಿದೆ.ಯೋಜನೆ ಮೂಲಕ ಉಚಿತ ಆರೋಗ್ಯ ಸೇವೆ ಪಡೆಯುವವರ ಸಂಖ್ಯೆ ಶೀಘ್ರವಾಗಿ ವರ್ಧಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ ಬಳಿಕ ಗೇಟ್ಸ್ ಈ ಅಭಿನಂದನೆ ಹೇಳಿದ್ದಾರೆ.

ಅಂತೆಯೇ, ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ ಓ೦ಮಹಾನಿರ್ದೇಶಕರಾದ ಟಿಎಘೆಬ್ರಾಸಿಯಸ್ ಜನವರಿ 3ರಂದು ಏಳು ಲಕ್ಷ ಜನರು ತಮ್ಮ ಆರೋಗ್ಯ ಸೇವೆ ಪಡೆಯಲು ನೆರವಾದ ಆಯುಷ್ಮಾನ್ ಭಾರತ್ ಯೋಜನೆ ಕುರಿತು ಪ್ರಧಾನಿ ಮೋದಿ ಮತ್ತು ಆರೋಗ್ಯ ಸಚಿವರನ್ನು ಪ್ರಶಂಸಿಸಿದ್ದರು.
"ತನ್ನ ಮೊದಲ 100 ದಿನಗಳಲ್ಲಿ ಭಾರತದ ಆಯುಷ್ಮಾನ್ ಭಾರತ್ ಯೋಜನೆ ಸುಮಾರು 700,000 ಜನರಿಗೆ ಉಚಿತ ಆರೈಕೆ ಒದಗಿಸಿದೆ ನಾನು ಭಾರತ ಸರ್ಕಾರದ ಈ ದಾರ್ಶನಿಕ ನಾಯಕತ್ವಕ್ಕೆ, ಪ್ರಧಾನಿ ಮೋದಿ ಹಾಗೂ ಆರೋಗ್ಯ ಸಚಿವ ನಡ್ಡಾ ಅವರನ್ನು ಅಭಿನಂದಿಸುತ್ತೇನೆ" ಅವರು ಟ್ವೀಟ್ ಮಾಡಿದ್ದರು.
ಜನವರಿ 1ರಂದು ಮಾತನಾಡಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾರತ ಸರ್ಕಾರದ ಆರೋಗ್ಯ ಕಾಳಜಿ ಯೋಜನೆ "ಆಯುಷ್ಮಾನ್ ಭಾರತ್" ಒಂದು ಗೇಮ್ ಚೇಂಜರ್ ಎಂದು ಬ್ಣ್ಣಿಸಿದ್ದರು.ಯೋಜನೆ ಪ್ರಾರಂಭಗೊಂಡ ದಿನದಿಂದ ಪ್ರತಿದಿನ ಸರಾಸರಿ 5,000 ಮಂದಿ ಇದರ ಸೌಲಭ್ಯ ಹೊಂದುತ್ತಿದ್ದಾರೆ.
ಸೆಪ್ಟೆಂಬರ್ 23, 2018ರಂದು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಆರೋಗ್ಯ ಕಾಳಜಿ ಯೋಜನೆ "ಆಯುಷ್ಮಾನ್ ಭಾರತ್" ಯೋಜನೆಗೆ ಚಾಲನೆ ನೀಡಿದ್ದರು.ಈ ಯೋಜನೆಯಂತೆ ದೇಶದಾದ್ಯಂತ ಇರುವ 10.74 ಕೋಟಿ ಗೆ ಹೆಚ್ಚಿನ ಬಡ ಕುಟುಂಬಕ್ಕೆ ವಾರ್ಷಿಕ 5 ರು. ಆರೋಗ್ಯ ಕಾತರಿ ನೀಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನರೇಂದ್ರ ಮೋದಿ ಸರ್ಕಾರBill Gatesಬಿಲ್ ಗೇಟ್ಸ್ಆಯುಷ್ಮಾನ್ ಭಾರತ್ ಯೋಜನೆAyushman Bharat SchemeNarendra Modi govt
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


