ಪ್ರಯಾಣಿಕರ ಗಮನಕ್ಕೆ: ರೈಲು ಪ್ರಯಾಣ ಮುಕ್ತಾಯಕ್ಕೆ 30 ನಿಮಿಷ ಮುಂಚೆ ಬ್ಲಾಂಕೆಟ್ ವಾಪಸ್ ಕೊಡಬೇಕು!
ರೈಲ್ವೆ ಇಲಾಖೆಯಲ್ಲಿ ಪ್ರಯಾಣಿಕರ ಸೌಲಭ್ಯಕ್ಕಾಗಿ ಇರಿಸಲಾದ ವಸ್ತುಗಳು ಎಗ್ಗಿಲ್ಲದೇ ಕಳ್ಳತನವಾಗುತ್ತಿದ್ದು, ಸಾರ್ವಜನಿಕ ವಸ್ತುಗಳ ಕಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ.

Published On :
ನವದೆಹಲಿ: ರೈಲ್ವೆ ಇಲಾಖೆಯಲ್ಲಿ ಪ್ರಯಾಣಿಕರ ಸೌಲಭ್ಯಕ್ಕಾಗಿ ಇರಿಸಲಾದ ವಸ್ತುಗಳು ಎಗ್ಗಿಲ್ಲದೇ ಕಳ್ಳತನವಾಗುತ್ತಿದ್ದು, ಸಾರ್ವಜನಿಕ ವಸ್ತುಗಳ ಕಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಕಳೆದ ವರ್ಷ ಬಿಡುಗಡೆಯಾದ ಅಂಕಿ-ಅಂಶದ ಪ್ರಕಾರ 2017 ರಲ್ಲಿ ದೀರ್ಘಪ್ರಯಾಣದ ರೈಲುಗಳಲ್ಲಿ ಬರೊಬ್ಬರಿ 1.95 ಲಕ್ಷ ಟವಲ್ ಗಳು, 81,736 ಬೆಡ್ ಶೀಟ್ ಗಳು, 55,573 ಪಿಲ್ಲೋ ಕವರ್, 5,038 ಪಿಲ್ಲೋ, 7,043 ಬ್ಲಾಂಕೆಟ್ ಗಳು 200 ಟಾಯ್ಲೆಟ್ ಮಗ್, 1,000 ಟ್ಯಾಪ್ 300 ಫ್ಲಶ್ ಪೈಪ್ ಗಳು ಕಳ್ಳತನವಾಗಿದೆ.
ಇನ್ನು 2018 ರಲ್ಲಿ 79,350 ಹ್ಯಾಂಡ್ ಟವಲ್ ಗಳು, 27,545 ಬೆಡ್ ಶೀಟ್ ಗಳು, 21,050 ಪಿಲ್ಲೋ ಕವರ್, 2,150 ಪಿಲ್ಲೋಗಳು 2,065 ಬ್ಲಾಂಕೆಟ್ ಗಳು ಕಳ್ಳತನವಾಗಿದ್ದು ಇವುಗಳ ಒಟ್ಟು ಮೊತ್ತ 62 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ರೈಲ್ವೆ ಇಲಾಖೆಯ ಬ್ಲಾಂಕೆಟ್ ಸೇರಿದಂತೆ ಇತರ ವಸ್ತುಗಳ ಕಳ್ಳತನಕ್ಕೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದ್ದು ಇನ್ನು ಮುಂದೆ 30 ನಿಮಿಷಗಳಷ್ಟು ಪ್ರಯಾಣ ಬಾಕಿ ಇರುವಾಗಲೇ ಬ್ಲಾಂಕೆಟ್ ನ್ನು ವಾಪಸ್ ಪಡೆಯುವ ಕ್ರಮ ಅಳವಡಿಸಿಕೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


