ಆಕೆ ನನ್ನ ಹೃದಯ ಕದ್ದಿದ್ದಾಳೆ, ಹುಡುಕಿಕೊಡಿ; ದೂರು ಕೇಳಿ ತಬ್ಬಿಬ್ಬಾದ ಪೊಲೀಸರು!
ಕಳುವಾದ ವಸ್ತುಗಳನ್ನು ಹುಡುಕಿಕೊಡುವಂತೆ ದೂರು ನೀಡುವುದು ಸಹಜ, ಆದರೆ ಇಲ್ಲೊಬ್ಬ ವ್ಯಕ್ತಿ ನೀಡಿದ ದೂರಿನಿಂದಾಗಿ ಸ್ವತಃ ಪೊಲೀಸರೇ ತಬ್ಬಿಬ್ಬಾಗಿದ್ದಾರೆ....

Published On :
ನಾಗಪುರ: ಕಳುವಾದ ವಸ್ತುಗಳನ್ನು ಹುಡುಕಿಕೊಡುವಂತೆ ದೂರು ನೀಡುವುದು ಸಹಜ, ಆದರೆ ಇಲ್ಲೊಬ್ಬ ವ್ಯಕ್ತಿ ನೀಡಿದ ದೂರಿನಿಂದಾಗಿ ಸ್ವತಃ ಪೊಲೀಸರೇ ತಬ್ಬಿಬ್ಬಾಗಿದ್ದಾರೆ.
ಮಹಾರಾಷ್ಟ್ರದಲ್ಲೊಬ್ಬ ಯುವಕ, ಹುಡುಗಿಯೊಬ್ಬಳು ನನ್ನ ಹೃದಯ ಕಳೆದುಕೊಂಡಿದ್ದೇನೆ. ಮರಳಿ ತಂದುಕೊಂಡಿ ಎಂದು ದೂರು ನೀಡಿದ ವಿಲಕ್ಷಣ ಪ್ರಸಂಗ ನಡೆದಿದೆ.
ನಾಗ್ಪುರ ಪೊಲೀಸ್ ಠಾಣೆಯೊಂದರಲ್ಲಿ ಇತ್ತೀಚಿಗೆ ಈ ಪ್ರಸಂಗ ನಡೆದಿದ್ದು, ಜಿಲ್ಲೆಯ ಪೊಲೀಸ್ ಕಮಿಷನರ್ ಭೂಷಣ್ ಕುಮಾರ್ ಉಪಾಧ್ಯಾಯ ಅವರು ಇತ್ತೀಚಿಗೆ ಮಾಧ್ಯಮದವರೊಂದಿಗೆ ಮಾತನಾಡುತ್ತ ಈ ಘಟನೆ ಬಗ್ಗೆ ಹೇಳಿದ್ದಾರೆ.
ಠಾಣೆಯಲ್ಲಿ ನಮ್ಮ ಇನ್ಸಪೆಕ್ಟರ್ ಮುಂದೆ ಬಂದು ಕುಳಿತ ಯುವಕ ಹುಡುಗಿಯೊಬ್ಬಳು ನನ್ನ ಹೃದಯ ಕದ್ದಿದ್ದಾಳೆ. ಮರಳಿಸಿ ಕೊಡಿ ಎಂದ. ಇದನ್ನು ಕೇಳಿದ ಪೊಲೀಸರು ಹೌಹಾರಿ ಹೋದರು. ಇಂತಹ ಪ್ರಕರಣಗಳಿಗೆ ಪರಿಹಾರ ನೀಡಲು ಸಂಬಂಧಿಸಿದ ಕಾನೂನುಗಳಿಲ್ಲ ಎಂದು ಹೇಳಿ ಆತನನ್ನು ಮರಳಿ ಕಳಿಸುವಲ್ಲಿ ನಮಗೆ ಸಾಕು ಸಾಕಾಯಿತು ಎಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


