ಅಜ್ಜಿಯಂತೆ ಬಂದು ಅಯ್ಯಪ್ಪನ ದರ್ಶನ ಪಡೆದ 36 ವರ್ಷದ ದಲಿತ ಮಹಿಳೆ!
ಮಹಿಳೆಯರು ಪ್ರತಿಭಟನಾಕಾರರಿಗೆ ಹೆದರಿ ಮಾರುವೇಷದಲ್ಲಿ ಶಬರಿಮಲೆಗೆ ಆಗಮಿಸುತ್ತಿದ್ದು, 36 ವರ್ಷದ....

Published On :
ತಿರುವನಂತಪುರಂ: ಮಹಿಳೆಯರು ಪ್ರತಿಭಟನಾಕಾರರಿಗೆ ಹೆದರಿ ಮಾರುವೇಷದಲ್ಲಿ ಶಬರಿಮಲೆಗೆ ಆಗಮಿಸುತ್ತಿದ್ದು, 36 ವರ್ಷದ ಮಹಿಳೆಯೊಬ್ಬರು ವಯಸ್ಸಾದ ಅಜ್ಜಿಯಂತೆ ಮೇಕಪ್ ಮಾಡಿಕೊಂಡು ಬಂದು ಬುಧವಾರ ಅಯ್ಯಪ್ಪನ ದರ್ಶನ ಪಡೆದಿದ್ದಾರೆ.
ಅಜ್ಜಿಯ ವೇಷದಲ್ಲಿ ತೆರಳಿ ಇಂದು ಬೆಳಗ್ಗೆ 7.30ರ ಸುಮಾರಿಗೆ ಅಯ್ಯಪ್ಪನ ದರ್ಶನ ಪಡೆದಿರುವುದಾಗಿ ಕೇರಳ ದಲಿತ ಮಹಿಳಾ ಫೆಡರೇಶನ್ ರಾಜ್ಯ ಕಾರ್ಯದರ್ಶಿಯಾದ ಎಸ್.ಪಿ. ಮಂಜು ಅವರು ಹೇಳಿದ್ದಾರೆ. ಅಲ್ಲದೆ ತಾನು ಶಬರಿಮಲೆಗೆ ಭೇಟಿ ನೀಡಿದ ವಿಡಿಯೋವನ್ನು ಸಮಾಜಿಕ ಮಾಧ್ಯಮಕ್ಕೆ ಹಂಚಿಕೊಂಡಿದ್ದಾರೆ.
ಕೇರಳದ ದೇವಸ್ಥಾನವೊಂದರ ಪೂಜಾರಿಯ ಮಗಳಾಗಿರುವ ಮಂಜು ಮುಖಕ್ಕೆ ಮೇಕಪ್ ಮಾಡಿಕೊಂಡು ಶಬರಿಮಲೆಗೆ ಭೇಟಿ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.
ಅಜ್ಜಿಯಂತೆ ಡ್ರೆಸ್ ಮಾಡಿಕೊಂಡು, ತಲೆಗೆ ಕೂದಲಿಗೆ ಪವಿದ್ರ ಬೂದಿ ಹಚ್ಚಿಕೊಂಡು ದೊಡ್ಡ ಕೀವಿಯೋಲೆ ಹಾಗೂ ಬಿಂದಿ ಧರಿಸಿಕೊಂಡು ದೇವಸ್ಥಾನಕ್ಕೆ ತೆರಳಿದೆ. ನಾನು ಇದೇ ಮೊದಲ ಬಾರಿಗೆ ಶಬರಿಮಲೆಗೆ ಭೇಟಿ ನೀಡಿದ್ದರಿಂದ ಇರುಮುಡಿಕಟ್ಟು ಹಾಗೂ ಪೂಜಾ ವಿಧಾನಗಳ ಬಗ್ಗೆ ಗೊತ್ತಿರಲಿಲ್ಲ. ಹೀಗಾಗಿ ಅಯ್ಯಪ್ಪ ಸೇವಾ ಸಂಘಮ್ ಕಾರ್ಯಕರ್ತರ ಸಹಾಯ ಪಡೆದೆ ಎಂದು ಮಂಜು ತಿಳಿಸಿದ್ದಾರೆ.
ಬೆಟ್ಟದಲ್ಲಿ ಕೆಲವು ಜನ ನನ್ನನ್ನು ಗುರುತಿಸಿದರು. ಆದರೆ ಯಾರೂ ಪ್ರತಿಭಟಿಸಲಿಲ್ಲ ಎಂದು ದಲಿತ ನಾಯಕಿ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


