ದೇಶ

ದೇವಾಲಯದ ಕಾರ್ಯಕ್ರಮದಲ್ಲಿ ಮದ್ಯದ ಬಾಟಲ್ ಹಂಚಿಕೆ: ಉ.ಪ್ರ ಬಿಜೆಪಿ ಶಾಸಕನ ಘನಕಾರ್ಯ!

ದೇವಾಲಯದಲ್ಲಿ ಊಟ ವಿತರಣೆ ಮಾಡುವಾಗ ಅದರಲ್ಲಿ ಮದ್ಯದ ಬಾಟಲ್ ಕೂಡ ಹಂಚಿಕೆ ಮಾಡಲಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ದೇವಾಲಯದ ಕಾರ್ಯಕ್ರಮದಲ್ಲಿ ಮದ್ಯದ ಬಾಟಲ್ ಹಂಚಿಕೆ: ಉ.ಪ್ರ ಬಿಜೆಪಿ ಶಾಸಕನ ಘನಕಾರ್ಯ!
ದೇವಾಲಯದ ಕಾರ್ಯಕ್ರಮದಲ್ಲಿ ಮದ್ಯದ ಬಾಟಲ್ ಹಂಚಿಕೆ: ಉ.ಪ್ರ ಬಿಜೆಪಿ ಶಾಸಕನ ಘನಕಾರ್ಯ!
Published On :
ಲಖನೌ: ದೇವಾಲಯದಲ್ಲಿ ಊಟ ವಿತರಣೆ ಮಾಡುವಾಗ ಅದರಲ್ಲಿ ಮದ್ಯದ ಬಾಟಲ್ ಕೂಡ ಹಂಚಿಕೆ ಮಾಡಲಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 
ಹಾರ್ದೋಯಿಯ ಶ್ರವಣ ದೇವಿ ದೇವಾಲಯದಲ್ಲಿ ಊಟ ವಿತರಣೆ ಮಾಡಬೇಕಾದರೆ   ಬಿಜೆಪಿ ಶಾಸಕ ನಿತಿನ್ ಅಗರ್ವಾಲ್ ಊಟದ ಬಾಕ್ಸ್ ನಲ್ಲಿ ಮದ್ಯದ ಬಾಟಲ್ ಹಂಚಿದ್ದಾರೆ. 
ಸ್ಥಳೀಯ ಪಾಸಿ ಸಮುದಾಯಕ್ಕೆ ಈ ಮದ್ಯದ ಬಾಟಲ್ ಗಳನ್ನು ಹಂಚಿದ್ದು ಬಿಜೆಪಿ ಶಾಸಕನ ನಡೆ ಈಗ ವಿವಾದಕ್ಕೆ ಗುರಿಯಾಗಿದೆ. ಎಸ್ ಪಿಯಿಂದ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ನಿತಿನ್ ಅಗರ್ವಾಲ್ ಅವರ ತಂದೆ ನರೇಶ್ ಅಗರ್ವಾಲ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 
ಈ ಕ್ಷೇತ್ರದ ಬಿಜೆಪಿ ಸಂಸದ ಅನ್ ಶೂಲ್ ವರ್ಮಾ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದೇವಾಲಯದಲ್ಲಿ ಮದ್ಯದ ಬಾಟಲ್ ಗಳನ್ನು ಹಂಚಿರುವುದು ದುರದೃಷ್ಟಕರ ಎಂದಿದ್ದಾರೆ. ಅಷ್ಟೇ ಅಲ್ಲದೇ ಈ ಕುರಿತ ಮಾಹಿತಿಯನ್ನು ಪಕ್ಷದ ವರಿಷ್ಠರಿಗೆ ತಲುಪಿಸಲಾಗುವುದು ಎಂದೂ ತಿಳಿಸಿದ್ದಾರೆ. 
ದೇವಾಲಯದಲ್ಲಿ ಮದ್ಯದ ಬಾಟಲ್ ಗಳನ್ನು ಹಂಚಿರುವ ದೃಶ್ಯಾವಳಿಗಳನ್ನು ಎನ್ ಡಿಟಿವಿ ಪ್ರಕಟಿಸಿದ್ದು, ಧಾರ್ಮಿಕ ಕೇಂದ್ರದಲ್ಲಿ ಮದ್ಯದ ಬಾಟಲ್ ಹಂಚಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.