2050 ರೊಳಗೆ ಮಹಾರಾಷ್ಟ್ರದವರು ಪಿಎಂ ಆಗಿ ದೇಶ ಆಳುವುದು ಖಚಿತ: ಫಡ್ನವೀಸ್
2050 ನೇ ಇಸವಿಯೊಳಗೆ ಮಹಾರಾಷ್ಟ್ರದಿಂದ ಒಬ್ಬರಿಗಿಂತ ಹೆಚ್ಚು ಮಂದಿ ದೇಶದ ಪ್ರಧಾನಿಯಾಗಿ ಆಳ್ವಿಕೆ ನಡೆಸುತ್ತಾರೆ ಎಂದು ..

Published On :
ನಾಗಪುರ: 2050 ನೇ ಇಸವಿಯೊಳಗೆ ಮಹಾರಾಷ್ಟ್ರದಿಂದ ಒಬ್ಬರಿಗಿಂತ ಹೆಚ್ಚು ಮಂದಿ ದೇಶದ ಪ್ರಧಾನಿಯಾಗಿ ಆಳ್ವಿಕೆ ನಡೆಸುತ್ತಾರೆ ಎಂದು ಮುಖ್ಯಮಂತ್ರಿ ದೇವೇಂದ್ ಫಡ್ನವೀಸ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ನಾಗಪುರದಲ್ಲಿ ನಡೆದ 16ನೇ ಜಾಗತಿಕ ಮರಾಠಿ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಯಾರಾದರೂ ನಿಜವಾದ ಅರ್ಥದಲ್ಲಿ ಭಾರತವನ್ನು ಆಳುತ್ತಾರೆ ಎಂದಾದರೇ ಅದರಲ್ಲಿ ಬಬ್ಬರಿಗಿಂತ ಹೆಚ್ಚುು ಮಹಾರಾಷ್ಟ್ರದವರು ಇರುತ್ತಾರೆ, ನಾವು ಮಹಾರಾಷ್ಟ್ರಿಗರು ನಮಗೆ ಆ ಸಾಮರ್ಥ್ಯ ಇದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಮಹಾರಾಷ್ಟ್ರದವರೊಬ್ಬರು ಪ್ರಧಾನಿಯಾಗುವ ಅವಕಾಶವಿರುತ್ತದೆ, ಎಂದು ಹೇಳಿದ್ದಾರೆ, ಇತಿಹಾಸದಲ್ಲಿ ಹಲವು ಮಹಾರಾಷ್ಟ್ರಿಗರು ವಿವಿಧ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸಿರುವ ಉದಾಹರಣೆಯಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


